Connect with us

    KARNATAKA

    ಚಿಕ್ಕಮಗಳೂರು : ಬರಗಾಲದ ನೆಪವೊಡ್ಡಿ ಕ್ರೈಸ್ತಮತಕ್ಕೆ ಮತಾಂತರಕ್ಕೆ ಯತ್ನ, 3 ಬಂಧನ..!

    ಚಿಕ್ಕಮಗಳೂರು: ಬರಗಾಲವನ್ನು ನೆಪವಾಗಿಟ್ಟುಕೊಂಡು ಜನರನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

    ತೀವ್ರ ಬರಗಾಲ ಬಂದಿದೆ. ಮಳೆ-ಬೆಳೆ ಇಲ್ಲ. ಜನ ಸಂಕಷ್ಟದಲ್ಲಿ ಇದ್ದಾರೆ. ನೀವು ಕಷ್ಟದಲ್ಲಿ ಇದ್ದೀರಾ. ನಿಮ್ಮ ದೇವರಿಂದ ಏನೂ ಮಾಡಲು ಸಾಧ್ಯವಿಲ್ಲ, ನೀವು ನಮ್ಮ ಧರ್ಮಕ್ಕೆ ಬಂದರೆ ಯೇಸು ನಿಮಗೆಲ್ಲಾ ಒಳ್ಳೆಯದು ಮಾಡುತ್ತಾನೆ. ಮಳೆ-ಬೆಳೆ ಆಗಲಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತಾನೆ ಎಂದು ಹೇಳಿ ಮತಾಂತರ ಮಾಡುತ್ತಿದ್ದ ಮೂವರನ್ನು ಚಿಕ್ಕಮಗಳೂರು ತಾಲೂಕಿನ ಎರೇಹಳ್ಳಿ ಎಂಬ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ಧ ಹಿಂದೂಗಳು ಪೊಲೀಸರಿಗೆ ದೂರು ನೀಡಿದ್ದರು. ಮೂವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂವರಲ್ಲಿ ಓರ್ವ ಅಪ್ರಾಪ್ತ ಹಿಂದೂ ಹೇಳಲಾಗಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ, ಉಂಡೇದಾಸರಹಳ್ಳಿ, ಎರೇಹಳ್ಳಿಯ ಮನೆಗಳಿಗೆ ತೆರಳಿ ಮತಾಂತರ ಮಾಡಲು ಮುಂದಾಗಿದ್ದ. ಈ ವೇಳೆ ಎರೇಹಳ್ಳಿ ನಿವಾಸಿ ಪ್ರಸನ್ನ ಕುಮಾರ್‌ ಎಂಬವರ ಮನೆಗೂ ಹೋಗಿದ್ದರು. ನಿಮ್ಮ ದೇವರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಿಲ್ಲ. ಮಳೆ ಬರಿಸುತ್ತಿಲ್ಲ. ನಿಮ್ಮ ಮನೆಗೆ ಏಸು ಬರುತ್ತಾನೆ. ನಿಮ್ಮ ಕಷ್ಟಗಳಿಗೆ ಪರಿಹಾರ ಒದಗಿಸುತ್ತಾನೆ ಎಂದಿದ್ದಾರೆ. ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಹೋಗಿ ಮೂವರನ್ನು ಬಂಧಿಸಿದ್ದಾರೆ. ಮತಾಂತರ ಮಾಡಲು ಬಂದವರ ಮಾತುಗಳನ್ನ ಗಮನಿಸಿದ ಪ್ರಸನ್ನ ಆಕ್ರೋಶಗೊಂಡು ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಗ್ರಾಮಸ್ಥರು ಒಟ್ಟಾಗಿ ಮತಾಂತರ ಮಾಡುವ ಪ್ರಯತ್ನವನ್ನು ವಿರೋಧಿಸಿದ್ದಾರೆ. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *