Connect with us

  DAKSHINA KANNADA

  ‘ರಾಜ್ಯದಲ್ಲಿ BJP ಇಲ್ಲ,ಹಿಂದೆ B L ಸಂತೋಷರ BLP ಇತ್ತು,ಈಗ BS ಯಡಿಯೂರಪ್ಪರ BSP ಇದೆ’ ; ಸತ್ಯಜೀತ್ ಸುರತ್ಕಲ್

  ಮಂಗಳೂರು : ನಾನು ಬ್ರಾಹ್ಮಣ ಬಿಲ್ಲವ ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಟಿಕೆಟ್ ಸಿಕ್ಕಿ ಅವಕಾಶ ಸಿಕ್ತಿತ್ತು. ನಿಯತ್ತಿನ ರಾಜಕೀಯಕ್ಕೆ ಈಗಿನ ಕಾಲದಲ್ಲಿ ಬೆಲೆ ಇಲ್ಲ ನಾಯಕರು ಹೇಳಿದ ಹಾಗೆ ಬಕೆಟ್ ಹಿಡಿದವರಿಗೆ ಮಾತ್ರ ಬೆಲೆಯಿದೆ ಎಂದು ಹಿಂದೂ ಪರ ಹೋರಾಟಗಾರ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ.


  ಮಂಗಳೂರಿನಲ್ಲಿ ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ತಿಂಗಳಿನಿಂದ ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದೆ ಆದ್ರೆ ಅಭ್ಯರ್ಥಿಯಾಗಿ ಬಿಜೆಪಿ ಯಿಂದ ಬ್ರಿಜೇಶ್ ಚೌಟ ಗೆ ಟಿಕೆಟ್ ನೀಡಿದ್ರು.ಸೂಕ್ತ ಸ್ಥಾನಮಾನಕ್ಕಾಗಿ ನನ್ನ ಬೆಂಬಲಿಗರು ಬೇಡಿಕೆ ಇಟ್ಟಿದ್ರು ಘೋಷಣೆಯಾಗಿ ಎರಡು ಮೂರು ವಾರ ಕಳೆದಿದೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಬಿಜೆಪಿ ವರಿಷ್ಠರು ಹಲವು ಬಾರಿ ಸಮಯವಕಾಶ ಕೇಳಿದ್ರು ಆದರೆ ಯಾವುದೇ ಬೆಳವಣಿಗೆಯಾಗಿಲ್ಲ ಆದ್ದರಿಂದ ಟೀಂ ಸತ್ಯಜಿತ್ ಸುರತ್ಕಲ್ ಹಾಗೆಯೇ ಮುಂದುವರೆಯುತ್ತೆ ಎಂದು ಸ್ಪಷ್ಟಪಡಿಸಿದರು. ಸತ್ಯಜಿತ್ ಸುರತ್ಕಲ್ ದೊಡ್ಡ ಶಕ್ತಿ ಆದರೆ ಅವರ ಜಾತಿ ಸರಿಯಿಲ್ಲ ಎಂದು ಆನೇಕ ಹಿರಿಯ ನಾಯಕರು ಈ ಹಿಂದೆಯೂ ಹೇಳಿದ್ದಾರೆ. ನಾನು ಬ್ರಾಹ್ಮಣ ಬಿಲ್ಲವ ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಟಿಕೆಟ್ ಸಿಕ್ಕಿ ಅವಕಾಶ ಸಿಕ್ತಿತ್ತು. ನಿಯತ್ತಿನ ರಾಜಕೀಯಕ್ಕೆ ಈಗಿನ ಕಾಲದಲ್ಲಿ ಬೆಲೆ ಇಲ್ಲ ನಾಯಕರು ಹೇಳಿದ ಹಾಗೆ ಬಕೆಟ್ ಹಿಡಿದವರಿಗೆ ಮಾತ್ರ ಬೆಲೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಹುಟ್ಟಿದ್ದು, ಬಿಲ್ಲವ ಸಮಾಜದಲ್ಲಿ, ಕೋಟಿ -ಚೆನ್ನಯ್ಯರು ಸ್ವಾಭಿಮಾನವನ್ನ ಕಲಿಸಿದ್ದಾರೆ. ಉಡುಪಿ ಬಿಜೆಪಿ ಟಿಕೆಟ್ ಹಂಚಿಕೆಯಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ನ ವಿಪಕ್ಷ ಸ್ಥಾನದ ಹುದ್ದೆಯಲ್ಲಿದ್ದರು.ಇನ್ನು ಈ ಸಮಾಜಕ್ಕೆ ಮತ್ತೆ ಆ ಸ್ಥಾನ ಸಿಗಲು ಸಾಧ್ಯ ಇದೆಯಾ. ಒಂದು ಎಂ ಪಿ ಸೀಟ್ ಗಾಗಿ ಕೋಟ ಎರಡು ಹುದ್ದೆ ಕಳೆದುಕೊಂಡ್ರು ಎಂದ ಅವರು ಕರ್ನಾಟಕ ರಾಜ್ಯದಲ್ಲಿ ಈಗ ಬಿಜೆಪಿ ಇಲ್ಲ, ಬಿ ಎಸ್ಪಿ ಇದೆ. ವಿಧಾನ ಸಭಾ ಚುನಾವಣೆ ತನಕ ಬಿ ಎಲ್ ಪಿ ಇತ್ತು ಅಂದ್ರೆ ಬಿ ಎಲ್ ಸಂತೋಷ್ ಬಣ ಇತ್ತು ಈಗ ಬಿ ಎಸ್ ಯಡಿಯೂರಪ್ಪ ಬಣದ ಬಿಎಸ್ ಪಿ ಇದೆ ಎಂದರು.
  ಅವತ್ತು ಜನಾರ್ದನ್ ಪೂಜಾರಿ ಸೋಲಲು ನಾನು ಕಾರಣನಾಗಿದ್ದೆ. ಅವಾಗ ನಮಗೆ ಗೊತ್ತಿರಲಿಲ್ಲ,ನಮ್ಮ ದುರ್ದೈವ ನಮ್ಮನ್ನ ಬಳಸಿ ಜನಾರ್ಧನ ಪೂಜಾರಿಯ ಅವಸನ ಮಾಡಿದ್ರು. ಬ್ರಹ್ಮಕಲಶದಲ್ಲಿ ನಾಲ್ಕು ರೀತಿ ಅಡುಗೆ, ನಾಲ್ಕು ರೀತಿ ಊಟದ ವ್ಯವಸ್ಥೆ ಇದೆ ಹಾಗೆನೇ ಹಿಂದುತ್ವದ ಶಾಸಕರ ಅಧ್ಯಕ್ಷತೆಯ ದೇವಸ್ಥಾನದಲ್ಲೂ ಅದೆ ನಡೆಯುತ್ತಿದೆ. ಹಿಂದೂ ಸಮಾಜಕ್ಕೆ ತೊಂದರೆ ಇಲ್ಲ ಅಂತಾ ಹೇಳೋದಿಲ್ಲ ಬಾಹ್ಯ ಶಕ್ತಿಗಳಿಂದ ಹಿಂದೂ ಸಮಾಜಕ್ಕೆ ಖಂಡಿತ ತೊಂದರೆಯಿದೆ. ಕೇರಳ, ಮಲ್ಲಾಪುರಂ ನಲ್ಲಿ ಮತಾಂತರ, ಭಯೋತ್ಪಾದನೆ ಯಾಕೆ ಆಯ್ತು ಅಂತಾ ಕೇಳಿದ್ರೆ ಜಾತಿಯ, ಸ್ಪೃಶ್ಯ, ಅಸ್ಪೃಶ್ಯ ಅನ್ಯಾಯ ಅನಾಚಾರವನ್ನ ಹಿಂದುಳಿದ ವರ್ಗ ಅನುಭವಿಸಿದ ಕಾರಣದಿಂದ ಈಗಲೂ ಒಂದಷ್ಟು ಮತಾಂತರಗಳು ನಡೆಯುತ್ತೆ. ಹಿಂದುತ್ವದ ಭದ್ರಾಕೋಟೆಯನ್ನ ಇವರೇ ಹಾಳು ಮಾಡಿದ್ದಾರೆ ಎಂದು ಬಿಜೆಪಿ ಮೇಲೆ ಹರಿಹಾಯ್ದರು.

  Share Information
  Advertisement
  Click to comment

  You must be logged in to post a comment Login

  Leave a Reply