Connect with us

    DAKSHINA KANNADA

    ಕೇರಳದಲ್ಲಿ 5 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು – ಸಂಸದ ನಳಿನ್ ಕುಮಾರ್ ಕಟೀಲ್

    ಪುತ್ತೂರು ಎಪ್ರಿಲ್ 01: ಕೇರಳದಲ್ಲಿ ಬಿಜೆಪಿಗೆ ಭಾರೀ ಜನ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಕೇರಳದಲ್ಲಿ ಬಿಜೆಪಿ 5 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಕೇರಳ ರಾಜ್ಯ ಚುನಾವಣಾ ಸಹ ಉಸ್ತುವಾರಿ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


    ಪುತ್ತೂರಿನಲ್ಲಿ ಮಾತನಾಡಿದ ಅವರು ನಿನ್ನೆಯಷ್ಟೇ ಕಾಸರಗೋಡು ಮತ್ತು ಕಲ್ಲಿಕೋಟೆ ಲೋಕಸಭಾ ಕ್ಷೇತ್ರ ತಿರುಗಾಟ ನಡೆಸಿದ್ದೇನೆ, ರಾಜ್ಯಕ್ಕೆ ಈ ಸಂಬಂಧ ವರದಿಯನ್ನೂ ನೀಡಿದ್ದೇನೆ, ಕೇರಳದಲ್ಲಿ ಬಿಜೆಪಿ ಪರ ಗಾಳಿ ಬೀಸುತ್ತಿದೆ. ಹೆಚ್ಚಿನ ಯುವಕರು ಬಿಜೆಪಿ ಮತ್ತು ಮೋದಿ ಪರ ಒಲವು ಹೊಂದಿದ್ದಾರೆ. ಕೇರಳದಲ್ಲಿ ಈ ಬಾರಿ 5 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದರು.

    ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಮತಗಟ್ಟೆ ಕಾರ್ಯಕರ್ತರ ಸಭೆಯಲ್ಲಿ ಯುವಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೇರಳದಲ್ಲಿ ಎಲ್.ಡಿ.ಎಫ್ ಮತ್ತು ಯುಡಿಎಫ್ ವಿರುದ್ಧ ಆಕ್ರೋಶವಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply