KARNATAKA
ಚಾರ್ಮಾಡಿ ಘಾಟ್ – ರಸ್ತೆ ಮೇಲೆ ಬಿದ್ದ ಮರದ ಕೊಂಬೆ ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು

ಚಿಕ್ಕಮಗಳೂರು ಮೇ 29: ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಈ ನಡುವೆ ಗಾಳಿ ಮಳೆಗೆ ಮರದ ರಂಬೆಯೊಂದು ರಸ್ತೆಯ ಮೇಲೆ ಮುರಿದು ಬಿದ್ದಿದ್ದು, ಪ್ರವಾಸಿಗರಿದ್ದ ಕಾರೊಂದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಾರ್ಮಾಡಿ ಘಾಟಿಯಲ್ಲಿರುವ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ನಡೆದಿದೆ.
ಪ್ರವಾಸಿಗರು ಧರ್ಮಸ್ಥಳದಿಂದ ಬರುತ್ತಿದ್ದರು. ಈ ವೇಳೆ, ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಕಾರು ಬರುತ್ತಿದ್ದಂತೆ ಮರ ಮುರಿದು ಬಿದ್ದಿದೆ. ಅಕಸ್ಮಾತ್ ಮರ ಕಾರಿನ ಮೇಲೆ ಬಿದ್ದಿದ್ದರೆ ದೊಡ್ಡ ಮಟ್ಟದ ಅನಾಹುತವಾಗುತ್ತಿತ್ತು. ಕೊಟ್ಟಿಗೆಹಾರದ ಸ್ಥಳೀಯ ಯುವಕರು ಹಾಗೂ ಬಣಕಲ್ ಠಾಣೆ ಪೊಲೀಸರು ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
