Connect with us

    DAKSHINA KANNADA

    ಮಹಿಳೆಯ ಸರ ಎಳೆದು ಪರಾರಿಯಾದ ಕಳ್ಳರ ಕಾರು ಅಫಘಾತ – ಇಬ್ಬರು ಗಂಭೀರ

    ಕಡಬ ಅಕ್ಟೋಬರ್ 20: ಮಹಿಳೆಯೋರ್ವರ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಘಟನೆ ಕಡಬದ ಸವಣೂರಿನಲ್ಲಿ ನಡೆದಿದೆ.

    ಮಹಿಳೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಇಬ್ಬರು ಕಳ್ಳರು ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದರು. ತಕ್ಷಣ ಮಹಿಳೆ ಕಿರುಚಿಕೊಂಡಾಗ ಸ್ಥಳದಲ್ಲಿದ್ದ ಜನರು ಕಳ್ಳರನ್ನು ಬೆನ್ನಟ್ಟಿದರು.

    ಆಗ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದ್ದರಿಂದ ಇಬ್ಬರು ಅಪಘಾತಕ್ಕೆ ಸಿಲುಕಿ ಗಂಭೀರ ಗಾಯಗೊಂಡರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಇಬ್ಬರು ಕೂಡ ಕದಿಯುವುದಕ್ಕಾಗಿಯೇ ಕಾಸರಗೋಡಿನಿಂದ ಬಂದಿದ್ದರು ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply