Connect with us

KARNATAKA

ಮದುವೆ ವಿಚಾರದಲ್ಲಿ ಗಲಾಟೆ: ಬಾವಿಗೆ ಹಾರಿದ ತಂಗಿ ರಕ್ಷಿಸಲು ಹೋಗಿ ಅಣ್ಣನೂ ಮೃತ್ಯು..!

ಕಲಬುರಗಿ :  ಮನೆಯಲ್ಲಿ ಮದುವೆ ವಿಚಾರದಲ್ಲಿ  ನಡೆದ ಸಣ್ಣ ಜಗಳ ಅಣ್ಣ-ತಂಗಿಯ ಸಾವಿಗೆ ಕಾರಣವಾಗಿದೆ. ಕಲಬುರಗಿ ಜಿಲ್ಲೆಯ  ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲಿ ಅಣ್ಣ ಮತ್ತು ತಂಗಿ ಬಾವಿಗೆ ಬಿದ್ದು ಪ್ರಾಣ  ಕಳೆದುಕೊಂಡಿದ್ದಾರೆ.

ಸಂದೀಪ್ (23) ಮತ್ತು ನಂದಿನಿ‌ (19) ಎಂಬ ಅಣ್ಣ-ತಂಗಿಯೇ ಪ್ರಾಣ ಕಳೆದುಕೊಂಡವರು. ನಂದಿನಿಯ ಮದುವೆ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆದಿತ್ತು. ಅದರಲ್ಲೂ ಮುಖ್ಯವಾಗಿ ಮನೆಯವರು ಹೇಳಿದ್ದ ಹುಡುಗನನ್ನು ಮದುವೆ ಮಾಡಿಕೊಳ್ಳುವ ವಿಚಾರದಲ್ಲಿ ನಂದಿನಿ ಆಕ್ಷೇಪ ವ್ಯಕ್ತಪಡಿಸಿದ್ದಳು.ಮಾತಿಗೆ ಮಾತು ಬೆಳೆದು ಸಿಟ್ಟುಗೊಂಡ ನಂದಿನಿ ಮನೆಯಿಂದ ಹೊರಗೆ ಓಡಿಹೋಗಿ ಬಾವಿಗೆ ಹಾರಿದ್ದಳು. ಇದನ್ನೂ ನೋಡಿದ ಸಹೋದರ ಸಂದೀಪ್‌ ಆಕೆಯನ್ನು ಬೆನ್ನು ಹತ್ತಿ ಹೋಗಿದ್ದ. ಆದರೆ, ಆತನಿಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ಏನು ಮಾಡಬೇಕು ಎಂದು ತೋಚದೆ ಆತನೂ ಬಾವಿಗೆ ಹಾರಿದ್ದಾನೆ.ಕೊನೆಗೆ ಈಜು ಬಾರದೆ ಅಣ್ಣ ತಂಗಿಯಿಬ್ಬರೂ ಬಾವಿಯಲ್ಲಿ ಮುಳಗಿ ಸಾವು ಕಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಊರಿನವರು ಆಗಮಿಸಿ ಶವಗಳನ್ನು ಮೇಲೆತ್ತಿದ್ದಾರೆ.ಪಟಪಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿರುವ ಘಟನೆಗೆ ಸಂಬಂಧಿಸಿ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *