Connect with us

  LATEST NEWS

  ನಿನ್ನ ಹೆಸರು ಕೆಡಿಸಲು ಸಂಚು ಮಾಡುತ್ತಿದ್ದಾರೆ… ಆ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿಟ್ಟು ನಾನು ನಿನ್ನಜೊತೆ ಇದ್ದೇನೆ – ರಕ್ಷಿತ್ ಶೆಟ್ಟಿಗೆ ಕೊರಗಜ್ಜನ ಅಭಯ

  ಉಡುಪಿ ಜನವರಿ 30: ನಿನ್ನ ಹೆಸರು ಕೆಡಿಸಲು ಕೆಲವು ವ್ಯಕ್ತಿಗಳು ಸಂಚು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿಟ್ಟು ನಿನ್ನ ಒಳ್ಳೆಯ ಕಾರ್ಯಗಳಿಗೆ ಸದಾ ನಿನ್ನ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಕೊರಗಜ್ಜ ನಟ ರಕ್ಷಿತ್ ಶೆಟ್ಟಿಗೆ ಆಭಯ ನೀಡಿದರು.


  ರಕ್ಷಿತ್ ಶೆಟ್ಟಿ ಸಿನೆಮಾಗಳ ಬ್ಯುಸಿ ನಡುವೆ ಊರಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅದರಲ್ಲೂ ದೈವದ ಕಾರ್ಯಕ್ರಮಗಳಲ್ಲಿ ತಪ್ಪದೆ ಬಾಗಿಯಾಗುತ್ತಾರೆ. ಈ ನಡುವೆ ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಭಾಗಿಯಾಗಿದ್ದಾರೆ. ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ‌ ನೇಮೋತ್ಸವದಲ್ಲಿ ಭಾಗವಹಿಸಿ, ದೈವಸ್ಥಾನದ ಕಾರ್ಯಕ್ರಮದಲ್ಲಿ ಪ್ರಸಾದ ಸ್ವೀಕರಿಸಿದರು.


  ನಾನು ಹಾಕಿದ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೇ ಬೆಂಗಾವಲಾಗಿ ನಿಂತು ನಿರ್ವಿಘ್ನವಾಗಿ ನಡೆಸಿಕೊಡಬೇಕು ಕೊರಗಜ್ಜ ದೈವದ ಹತ್ತಿರ ರಕ್ಷಿತ್ ಶೆಟ್ಟಿ ಪ್ರಾರ್ಥಿಸಿದರು.

  ಈ ವೇಳೆ ದೈವ ಯಾವುದೇ ಒಳ್ಳೆ ಕಾರ್ಯ ಮಾಡಬೇಕಾದರೆ ಅದಕ್ಕೆ ಕೊರಗಜ್ಜನ ಆಶೀರ್ವಾದ ಬೇಕೆಬೇಕು. ನೀನು ಯೋಜನೆ ಹಾಕಿಕೊಂಡ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಯಾವಿದೇ ಸಮಸ್ಯೆ ಬಂದ್ರೂ ಅದಕ್ಕೆ ಪರಿಹಾರ ಕೊಡಲು ನಾನಿದ್ದೇನೆ. ನಿನ್ನ ಹೆಸರನ್ನು ಕೆಡಿಸಲು ಕೆಲವು ವ್ಯಕ್ತಿಗಳು ಸಂಚು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

  ಆ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿಟ್ಟು ನಿನ್ನ ಒಳ್ಳೆಯ ಕಾರ್ಯಗಳಿಗೆ ಸದಾ ನಿನ್ನ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಕೊರಗಜ್ಜ ನಟ ರಕ್ಷಿತ್ ಶೆಟ್ಟಿಗೆ ಆಭಯ ನೀಡಿದರು.

  Share Information
  Advertisement
  Click to comment

  You must be logged in to post a comment Login

  Leave a Reply