LATEST NEWS
ಬಡವರ ಬಿಪಿಎಲ್ ಕಾರ್ಡ್ ಮಾತ್ರ ಬಿಜೆಪಿ ಸರಕಾರಕ್ಕೆ ಕಾಣೋದು – ಯುಟಿ ಖಾದರ್
ಮಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ದವರಿಗೆ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವುದಾಗಿ ಹೇಳಿಕೆ ನೀಡಿರುವ ಉಮೇಶ್ ಕತ್ತಿ ವಿರುದ್ಧ ಕಾಂಗ್ರೇಸ್ ಶಾಸಕ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಜನಸಾಮಾನ್ಯರ ವಿರುದ್ಧವಾಗಿದ್ದು, ಸರಿಯಾಗಿ ರೇಷನ್ ಕಾರ್ಡ್ ಅನ್ನು ಜನರಿಗೆ ಹಂಚಲು ಸರಕಾರದಿಂದ ಆಗುತ್ತಿಲ್ಲ. ಮೊದಲು ರೇಷನ್ ಕಾರ್ಡ್ ಇಲ್ಲದ ಬಡವರಿಗೆ ಕಾರ್ಡ್ ನೀಡುವ ಕೆಲಸವನ್ನು ಸರಕಾರ ಮಾಡಲಿ ಎಂದು ಯುಟಿ ಖಾದರ್ ಸಲಹೆ ನೀಡಿದರು.
ಬಡವರ ಯೋಜನೆ ಮಾತ್ರ ಇವರಿಗೆ ಕಾಣುವುದು. ಟಿವಿ, ಬೈಕ್ ಫ್ರಿಡ್ಜ್ ಬಿಟ್ಟುಬಿಡಿ. ಶ್ರೀಮಂತರ ಬಳಿ ಇರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ ಎಂದು ಯುಟಿ ಖಾದರ್ ಸಚಿವರ ವಿರುದ್ಧ ಕಿಡಿಕಾರಿದರು.