KUNDAPURA
ಕಾರು ಬೈಕ್ ನಡುವೆ ಅಪಘಾತ – ಬಿಜೆಪಿ ಮುಖಂಡನ ಸಾವು
ಕಾರು ಬೈಕ್ ನಡುವೆ ಅಪಘಾತ – ಬಿಜೆಪಿ ಮುಖಂಡನ ಸಾವು
ಉಡುಪಿ ಮೇ 9 : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಬಿಜೆಪಿ ಮುಖಂಡನೋರ್ವ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದಲ್ಲಿ ನಡೆದಿದೆ.ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಪ್ತ, ಬೇಳೂರು ಗ್ರಾ.ಪಂ ಮಾಜಿ ಸದಸ್ಯ, ಮಹೇಶ್ ಹೆಗ್ಡೆ ಮೃತ ದುರ್ದೈವಿ. ವಿಧಾನಸಭಾ ಚುನಾವಣೆಯ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪರ ಬೇಳೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಮನೆ-ಮನೆಗೆ ತೆರಳಿ ಮತ ಪ್ರಯಾಚನೆ ಮಾಡಿ ವಾಪಾಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಹೇಶ್ ಹೆಗ್ಡೆ ಸಾಗುತ್ತಿದ್ದ ಬೈಕ್ ಗೆ ಕಾರು ಢಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಮಹೇಶ್ ಹೆಗ್ಡೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ಕುಂದಾಪುರದಲ್ಲಿ ನಡೆಯಬೇಕಾಗಿದ್ದ ಬಿಜೆಪಿ ಪಾದಯಾತ್ರೆ ಕಾರ್ಯಕ್ರಮ ರದ್ದಾಗಿದೆ.
You must be logged in to post a comment Login