KUNDAPURA
ಪ್ರಕಾಶ್ ರೈ ಗೆ ಕಪ್ಪು ಬಾವುಟ ಪ್ರದರ್ಶನ ಸಾಧ್ಯತೆ, ಪೋಲಿಸ್ ಸರ್ಪಗಾವಲು
ಪ್ರಕಾಶ್ ರೈ ಗೆ ಕಪ್ಪು ಬಾವುಟ ಪ್ರದರ್ಶನ ಸಾಧ್ಯತೆ, ಪೋಲಿಸ್ ಸರ್ಪಗಾವಲು
ಉಡುಪಿ, ಅಕ್ಟೋಬರ್ 10 : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ದ ಇದೀಗ ಯೋಗಿ ಅವರು ಪ್ರತಿನಿಧಿಸುತ್ತಿರುವ ನಾಥ ಪಂಥದವರು ಗರಂ ಆಗಿದ್ದಾರೆ.
ಕಾರಂತ ಹುಟ್ಟೂರ ಪ್ರಶಸ್ತಿ ಪಡೆಯಲು ಕುಂದಾಪುರದ ಕೋಟಾ ಕ್ಕೆ ಆಗಮಿಸಿರುವ ನಟ ಪ್ರಕಾಶ್ ರೈ ವಿರುದ್ದ ಪ್ರತಿಭಟನೆ ನಡೆಸಲು ಎಂಟು ಸಂಘಟನೆಗಳು ತೀರ್ಮಾನಿಸಿವೆ. ಸಮಾರಂಭದಲ್ಲಿ ಪ್ರಕಾಶ್ ರೈ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ತೀರ್ಮಾನಿಲಾಗಿದೆ ನಾಥ ಪಂಥದ ಮುಖಂಡ ಡಾ. ಕೇಶವ ಕೋಟೇಶ್ವರ ಹೇಳಿದ್ದಾರೆ. ಕಾರಂತರ ಪ್ರಶಸ್ತಿ ಕೊಡಲು ನಮ್ಮ ವಿರೋಧವಿಲ್ಲ, ಆದರೆ ಆದಿತ್ಯತಾಥ ಯೋಗಿಗೆ ಬೈದಿದ್ದಕ್ಕೆ ಪ್ರಕಾಶ್ ರೈ ಕ್ಷಮೆ ಕೇಳಬೇಕು. ನಾವು ಪ್ರತಿಭಟಿಸ್ತೇವೆ ಪೊಲೀಸರು ಅವರ ಕೆಲಸ ಮಾಡಲಿ ಎಂದು ಗುಡುಗಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿಗೆ ನಟ ಎಂದಿದ್ದ ಪ್ರಕಾಶ್ ರೈ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ವಿವಾದವನ್ನು ಹುಟ್ಟುಹಾಕಿದೆ. ಮಾತ್ರವಲ್ಲ ಕೋಟಾ ಶಿವರಾಂ ಕಾರಂತರ ಹುಟ್ಟೂರ ಪ್ರಶಸ್ತಿಗೆ ಆಯ್ಕೆಯಾದ ಪ್ರಕಾಶ್ ರೈ ಅವರ ವಿರುದ್ದ ವ್ಯಾಪಕ ಆಕ್ರೊಶ ವ್ಯಕ್ತವಾಗುತ್ತಿದೆ.
Facebook Comments
You may like
ಯಾರಿಗೂ ವಂಚನೆ ಮಾಡಿಲ್ಲ – ಐ ವಿಲ್ ಕಮ್ ಬ್ಯಾಕ್ ಅಗೈನ್ – ಬಿ.ಆರ್ ಶೆಟ್ಟಿ
ಕೋಟ – ಬೈಕ್ ಗೆ ಕಾರು ಡಿಕ್ಕಿ ಸವಾರ ಸ್ಥಳದಲ್ಲೇ ಸಾವು
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಟೈಂ ಕೀಪಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರ ಹೊಡೆದಾಟ – ಬಸ್ ವಶಕ್ಕೆ
ಸಾಸ್ತಾನ ಟೋಲ್ ವಿನಾಯಿತಿ ನೀಡಲು ಒಪ್ಪದ ನವಯುಗ ಸಂಸ್ಥೆ – ಗರಂ ಆದ ಸಂಸದೆ ಶೋಭಾ ಕರಂದ್ಲಾಜೆ
ನನ್ನ ಹೆಸರಲ್ಲೇ ರಾಮನಿದ್ದಾನೆ..ನಮ್ಮೂರಿನ ರಾಮಮಂದಿರಕ್ಕೆ ದೇಣಿಗೆ ನೀಡುತ್ತೆನೆ – ಸಿದ್ದರಾಮಯ್ಯ
You must be logged in to post a comment Login