Connect with us

    KUNDAPURA

    ಸ್ಪೋರ್ಟ್ಸ್ ಬೈಕ್ ಕ್ರೇಜ್,ಯುವಕ ಬಲಿ

    ಸ್ಪೋರ್ಟ್ಸ್ ಬೈಕ್ ಕ್ರೇಜ್,ಯುವಕ ಬಲಿ

    ಉಡುಪಿ, ಸೆಪ್ಟೆಂಬರ್ 25: ಸ್ಪೋರ್ಟ್ಸ್ ಬೈಕ್ ಕ್ರೇಜ್ ಗೆ ಓರ್ವ ಯುವಕ ಸಾವನ್ನಪ್ಪಿದ ಘಟನೆ ಕುಂದಾಪುರ ತ್ರಾಸಿ ಬೀಚ್ ಬಳಿ ನಡೆದಿದೆ. ತಲ್ಲೂರು ನಿವಾ‍ಸಿ ಫ್ಲೆಮಿಂಗ್ ಸೊನಾಲ್ ಮೆಂಡೋನ್ಸಾ(20)ಮೃತ ಯುವಕ. ತಂದೆ ಕೊಡಿಸಿದ ಹೊಸ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ಸಹೋದರ ಸಂಬಂಧಿ ಜಾಯ್ಸ್ಟನ್ (18)ನನ್ನು ಕೂರಿಸಿ ಜಾಲಿ ರೈಡ್ ಗೆಂದು ಹೋದ ಸಂಧರ್ಭ ಈ ಘಟನೆ ಸಂಭವಿಸಿದೆ.

    ಅತೀ ವೇಗದಲ್ಲಿ ಬೈಕ್ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.ಇಬ್ಬರು ಯುವಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಇಬ್ಬರು ಯುವಕರಲ್ಲಿ ಸೊನಾಲ್ ಆಸ್ಪತ್ರೆಗೆ ಸಾ‍ಗಿಸುವಷ್ಟರಲ್ಲೇ ಮೃತಪಟ್ಟರೆ ಜಾಯ್ ಸ್ಟನ್ ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಕೆಎಂಸಿಗೆ ದಾಖಲಾಗಿದ್ದಾರೆ.

    ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    Share Information
    Advertisement
    Click to comment

    You must be logged in to post a comment Login

    Leave a Reply