Connect with us

    BANTWAL

    ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಮದ್ಯ ವಶಕ್ಕೆ ಪಡೆದ ಬಿಜೆಪಿ ಕಾರ್ಯಕರ್ತರು

    ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಮದ್ಯ ವಶಕ್ಕೆ ಪಡೆದ ಬಿಜೆಪಿ ಕಾರ್ಯಕರ್ತರು

    ಬಂಟ್ವಾಳ ಮೇ 10: ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಮದ್ಯವನ್ನು ಬಿಜೆಪಿ ಕಾರ್ಯಕರ್ತರು ವಶಕ್ಕೆ ಪಡೆದ ಘಟನೆ ನಡೆದಿದೆ. ಬಂಟ್ವಾಳದ ಮೆಲ್ಕಾರ್ ನಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೇಸ್ ಮುಖಂಡನ ಕಾರಿನಲ್ಲಿ ಅಪಾರ ಪ್ರಮಾಣದ ಮದ್ಯ ಪತ್ತೆಯಾಗಿದೆ.

    ಕಾರು ಮೆಲ್ಕಾರ್ ನ ಬಿರ್ವ ಸೆಂಟರ್ ನಿಂದ ಮದ್ಯ ತುಂಬಿಸಿ ಬರುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾರನ್ನು ತಡೆಹಿಡಿದಿದ್ದಾರೆ. ಕಾರ್ಯಕರ್ತರ ಪ್ರಕಾರ ಈ ಕಾರು ಮತ್ತು ಮದ್ಯ ಬಿರ್ವ ಸೆಂಟರ್ ನ ಮಾಲಕ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅದ್ಯಕ್ಷ ಸಂಜೀವ ಪೂಜಾರಿಗೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply