Connect with us

LATEST NEWS

ಗ್ರಾಮಪಂಚಾಯತ್ ಸದಸ್ಯನಂತೆ ವರ್ತಿಸುತ್ತಿರುವ ಪ್ರಧಾನಿ ಮೋದಿ- ಐವನ್ ಡಿಸೋಜಾ ವ್ಯಂಗ್ಯ

ಗ್ರಾಮಪಂಚಾಯತ್ ಸದಸ್ಯನಂತೆ ವರ್ತಿಸುತ್ತಿರುವ ಪ್ರಧಾನಿ ಮೋದಿ- ಐವನ್ ಡಿಸೋಜಾ ವ್ಯಂಗ್ಯ

ಪುತ್ತೂರು, ಮೇ 9 : ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಾವು ಪ್ರಧಾನಿ ಎನ್ನುವುದನ್ನು ಮರೆತು ಗ್ರಾಮ ಪಂಚಾಯತ್ ಸದಸ್ಯನಂತೆ ವರ್ತಿಸುತ್ತಿರುವುದು ರಾಜ್ಯದ ಜನತೆಗೆ ಅವರನ್ನು ಪ್ರಧಾನಿ ಎನ್ನುವ ಗೌರವದಿಂದ ನೋಡಲಾಗುತ್ತಿಲ್ಲ ಎಂದು ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾನನಾಡಿದ ಅವರು ಪ್ರಧಾನಿಯಾದವರಿಗೆ ತನ್ನದೇ ಆದ ಗೌರವವಿದ್ದು, ಇದನ್ನು ನರೇಂದ್ರ ಮೋದಿ ಸಂಪೂರ್ಣ ಮರೆತಂತಿದೆ.

ಚುನಾವಣಾ ಪ್ರಚಾರಕ್ಕಾಗಿ ರಾಜ್ಯದ ಉದ್ದಗಲಕ್ಕೂ ಹೋಗುತ್ತಿರುವ ಮೋದಿಯವರು ತಾನು ರಾಷ್ಟ್ರದ ಪ್ರಧಾನಿ ಎನ್ನುವುದನ್ನೂ ಮರೆತಿದ್ದಾರೆ.

ಒರ್ವ ಗ್ರಾಮ ಪಂಚಾಯತ್ ಸದಸ್ಯ ಯಾವ ರೀತಿಯಲ್ಲಿ ಮಾತನಾಡುತ್ತಾನೆ, ಹೇಗೆ ವರ್ತಿಸುತ್ತಾನೆ ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ತಿಸುತ್ತಿದ್ದಾರೆ.

ಇವರ ಈ ವರ್ತನೆಯಿಂದಾಗಿ ಇವರನ್ನು ಪ್ರಧಾನಿಯೆಂದು ಗೌರವಿಸುವುದಕ್ಕೂ ರಾಜ್ಯದ ಜನತೆಗೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿ ಬಾರಿಯೂ ಸುಳ್ಳನ್ನೇ ಹೇಳುವ ಮೂಲಕ ರಾಜ್ಯದ ಜನತೆಯನ್ನು ದಾರಿ ತಪ್ಪಿಸುವ ಪ್ರಧಾನಿ ಮೋದಿಯವರಿಗೆ ಈ ಬಾರಿ ರಾಜ್ಯದ ಜನತೆ ಕಾಂಗ್ರೇಸ್ ಗೆ ಮತ ನೀಡುವ ಮೂಲಕ ಉತ್ತರ ನೀಡಲಿದ್ದಾರೆ ಎಂದರು.