LATEST NEWS
ಇಕ್ಕಟ್ ಮೂಲಕ ಬೆಳ್ಳಿತೆರೆಗೆ ಭೂಮಿ ಶೆಟ್ಟಿ ಎಂಟ್ರಿ
ಉಡುಪಿ : ಉಡುಪಿ ಬೆಡಗಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಈಗ ನಾಯಕಿಯಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ತಮ್ಮ ಮೊದಲ ಚಿತ್ರ ಇಕ್ಕಟ್ ಗೆ ಶೂಟಿಂಗ್ ಕೂಡ ಮುಗಿಸಿದ್ದಾರೆ.
ಕಿರುತೆರೆಯ ‘ಕಿನ್ನರಿ’ ಧಾರಾವಾಹಿ ಮೂಲಕ ಜನಪ್ರಿಯರಾದ ನಟಿ ಭೂಮಿ ಶೆಟ್ಟಿ, ಆ ಬಳಿಕ ಬಿಗ್ ಬಾಸ್ ಮನೆಗೂ ಹೋಗಿಬಂದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಯಾಗಿದ್ದ ಭೂಮಿ, ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದರು. ಸದ್ಯ ಅವರೀಗ ನಾಯಕಿಯಾಗುವುದಕ್ಕೆ ಸಜ್ಜಾಗಿದ್ದಾರೆ. ಕಾಮಿಡಿ ಕಥೆಯುಳ್ಳ ‘ಇಕ್ಕಟ್’ ಅನ್ನೋ ಸಿನಿಮಾಕ್ಕೆ ಭೂಮಿ ಈಗ ಹೀರೋಯಿನ್!
ಭೂಮಿ ಶೆಟ್ಟಿ ನಾಯಕಿಯಾಗಿರುವ ಈ ಸಿನಿಮಾವನ್ನು ಈಶಾಂ ಖಾನ್ ಮತ್ತು ಹಸೀನ್ ಖಾನ್ ನಿರ್ದೇಶಿಸಿದ್ದಾರೆ. ಈ ಹಿಂದೆ ‘ಲೂಸ್ ಕನೆಕ್ಷನ್’ ಅನ್ನೋ ವೆಬ್ ಸಿರೀಸ್ ಅನ್ನು ಈ ಜೋಡಿ ನಿರ್ದೇಶನ ಮಾಡಿತ್ತು. ಆ ವೆಬ್ ಸಿರೀಸ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು ಕೂಡ. ವಿಶೇಷವೆಂದರೆ, ‘ಇಕ್ಕಟ್’ ಸಿನಿಮಾಕ್ಕೆ ಅವರೇ ಬಂಡವಾಳವನ್ನೂ ಹೂಡಿದ್ದಾರೆ. ಇದು ಈ ಜೋಡಿಯ ಮೊದಲ ನಿರ್ಮಾಣ ಮತ್ತು ನಿರ್ದೇಶನದ ಸಿನಿಮಾವಾಗಿದೆ. ವಿಶೇಷವೆಂದರೆ, ಇಡೀ ಸಿನಿಮಾವನ್ನು ಲಾಕ್‌ಡೌನ್ ಅವಧಿಯಲ್ಲೇ ಶೂಟಿಂಗ್ ಮಾಡಲಾಗಿದೆಯಂತೆ!
ಲಾಕ್‌ಡೌನ್ ಕಥೆಯಾದ್ದರಿಂದ, ಲಾಕ್ಡೌನ್ನಲ್ಲೇ ತಯಾರಾಗಿ, ಇದೀಗ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದ ಮೂಲಕ ‘ಬಿಗ್ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಹಿರಿತೆರೆಗೆ ಬಂದಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು ನಾಗಭೂಷಣ್ ಈ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಇದಲ್ಲದೆ ಆನಂದ್ ನೀನಾಸಂ, ಸುಂದರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
Facebook Comments
You may like
ದರ್ಶನ್ ನನ್ನು ಚಪ್ಪಲಿ ಇಲ್ಲದೆ ನಿಲ್ಲಿಸಿದಾಗ ಅವನ ಸಪೋರ್ಟ್ಗೆ ಬಂದವನು ನಾನು: ಜಗ್ಗೇಶ್
ಶೂಟಿಂಗ್ ಸೆಟ್ಗೆ ಹೋಗಿ ಜಗ್ಗೇಶ್ ವಿರುದ್ದ ಗರಂ ಆದ ದರ್ಶನ್ ಫ್ಯಾನ್ಸ್…ಕ್ಷಮೆ ಕೇಳಿದ ನಟ ಜಗ್ಗೇಶ್
ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಿದ ‘ಪೊಗರು’ ನಿರ್ದೇಶಕ ನಂದ ಕಿಶೋರ್
ಕಟೀಲು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದ ನಟ ವಿಜಯ ರಾಘವೇಂದ್ರ
ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪುತ್ರಿಗೆ ನಿನ್ನ ರೇಟ್ ಎಷ್ಟು ಎಂದು ಮೆಸೇಜ್…!!
ಇನ್ನು ಹೊಸ ತುಳು ಸಿನೆಮಾವನ್ನು ಮನೆಯಲ್ಲೇ ಕುಳಿತು ವೀಕ್ಷಿಸಿ.. ಸದ್ದು ಮಾಡಲಿದೆ ನಮ್ಮ ಕುಡ್ಲ ಟಾಕೀಸ್
You must be logged in to post a comment Login