Connect with us

LATEST NEWS

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು, ಕಿತ್ತಳೆ ಬಣ್ಣಕ್ಕೆ ತಿರುಗಿದ ಆಗಸ….

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು, ಕಿತ್ತಳೆ ಬಣ್ಣಕ್ಕೆ ತಿರುಗಿದ ಆಗಸ….

ಕ್ಯಾಲಿಫೋರ್ನಿಯಾ, ಸೆಪ್ಟಂಬರ್ 10: ಕ್ಯಾಲಿಫೋರ್ನಿಯಾದ ಪ್ರದೇಶಗಳಲ್ಲಿ ತೀವ್ರ ಕಾಡ್ಗಿಚ್ಚು ಹರಡುತ್ತಿದ್ದು, ಆಸುಪಾಸಿನ ಪ್ರದೇಶಗಳಲ್ಲಿ ಸೆಪ್ಟಂಬರ್ 6 ರಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಸುಮಾರು 45,000 ಎಕರೆ ಪ್ರದೇಶ ಸಂಪೂರ್ಣ ಕಾಡ್ಗಿಚ್ಚಿನಿಂದ ಆವರಿಸಲ್ಪಟ್ಟಿದ್ದು, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ, ಮಡೆರಾ, ಫ್ರೆಸ್ನೊ, ಸ್ಯಾನ್ ಬರ್ನಾರ್ಡಿನೊ ಮತ್ತು ಮಾರಿಪೊಸಾ ಎಂಬ ಐದು ಪ್ರದೇಶಗಳು ತುರ್ತು ಪರಿಸ್ಥಿತಿಯಲ್ಲಿವೆ.

ಕಾಡ್ಗಿಚ್ಚು ಅತ್ಯಂತ ವೇಗವಾಗಿ ಪಸರಿಸುತ್ತಿದ್ದು, ಈ ಭಾಗದ 200 ಕ್ಕೂ ಹೆಚ್ಚು ಜನರನ್ನು ಈ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.  .

ಭಾನುವಾರ, ಮಡೆರಾ ಕೌಂಟಿ ಶೆರಿಫ್ ಕಚೇರಿ 20 ಸ್ಥಳಾಂತರಿಸಿದವರನ್ನು ಆರೋಗ್ಯದ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ಪರಿಸ್ಥಿತಿಯನ್ನು ಹಾಗೂ ಚಿತ್ರವನ್ನು ಟ್ವಿಟರ್ ಬಳಕೆದಾರ ಕ್ರಿಸ್ ಮೆಲ್ ಪೋಸ್ಟ್ ಮಾಡಿದ್ದು
“ನನ್ನ ಮನೆಯಿಂದ ಆಕಾಶವು ತುಂಬಾ ದಪ್ಪವಾಗಿರುತ್ತದೆ; ಆಕಾಶವು ಕೊಳಕು ಕಂದು ಬಣ್ಣದ ಮೋಡವಾಗಿದೆ ಮತ್ತು ನಾನು ಬೆಂಕಿಯ ಪಶ್ಚಿಮಕ್ಕೆ 25 ನಿಮಿಷಗಳ ಕಾಲ ವಾಸಿಸುತ್ತಿದ್ದೇನೆ ””ಇದು ಉಸಿರಾಡಲು ಒಂದು ರೀತಿಯ ಹೋರಾಟವಾಗಿದೆ.” ಎಂದು ಅಲ್ಲಿನ ಪರಿಸ್ಥಿತಿಯ ಭಯಾನಕತೆಯನ್ನು ಬರೆದುಕೊಂಡಿದ್ದಾರೆ.

ಕಣಿವೆಯಲ್ಲಿನ ಕಾಡ್ಗಿಚ್ಚಿನಿಂದಾಗಿ ಸುಮಾರು 3,300 ಆಸ್ತಿಪಾಸ್ತಿಗಳು ನಾಶವಾಗಿವೆ ಮತ್ತು ಎಂಟು ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. .

ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ (ಕ್ಯಾಲ್ಫೈರ್) ಪ್ರಕಾರ, ಭಾನುವಾರ ಮಧ್ಯಾಹ್ನದಿಂದ ಬೆಂಕಿಯನ್ನು ನಂದಿಸಲು ಭಾರಿ ಹೋರಾಟ ನಡೆಯುತ್ತಿದೆ 15,000 ಕ್ಕೂ ಹೆಚ್ಚು ಅಗ್ನಿಶಾಮಕ ದಳದವರು ರಾಜ್ಯಾದ್ಯಂತ ಹೆಚ್ಚು ಹರಡುವ ಜ್ವಾಲೆಗಳೊಂದಿಗೆ ಹೋರಾಡುತ್ತಿದ್ದಾರೆ.

ಕಾಡ್ಗಿಚ್ಚಿನ ಪರಿಣಾಮ ಇದೀಗ ಕ್ಯಾಲಿಫೋರ್ನಿಯಾ ರಾಜ್ಯದ ವಾತಾವರಣದ ಮೇಲೆ ಬೀಳಲಾರಂಭಿಸಿದ್ದು, ಬೆಂಕಿಯ ಶಾಖದ ಅಲೆ ಬೀಸಲಾರಂಭಿಸಿದೆ.

ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10:23 ಕ್ಕೆ ಯುಕೈಪಾದ ಎಲ್ ಡೊರಾಡೊ ರಾಂಚ್ ಪಾರ್ಕ್ನಲ್ಲಿ ಬೆಂಕಿ ಪ್ರಾರಂಭವಾಗಿ ಇಡೀ ಕ್ಯಾಲಿಫೋರ್ನಿಯಾ ಕಣಿವೆಯನ್ನು ಆವರಿಸಿದೆ.

ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ಪರಿಣಾಮ ಇದೀಗ ಸ್ಯಾನ್ ಫ್ರಾನ್ಸಿಸ್ಕೋದ ವಾತಾವರಣದಲ್ಲೂ ಕಂಡು ಬರಲಾರಂಭಿಸಿದೆ.

ವಾತಾವರಣವು ಕಂದು ಹಾಗೂ ಕಿತ್ತಳೆ ಬಣ್ಣಕ್ಕೆ ತಿರುಗಿದ್ದು, ಮುಂಬರುವ ಗಂಢಾತರ ನೆನೆದು ಅಲ್ಲಿನ ಜನ ಭಯಭೀತರಾಗಿದ್ದಾರೆ.

ಕಾಡ್ಗಿಚ್ಚಿನಿಂದಾಗಿ ಲಕ್ಷಾಂತರ ಸಂಖ್ಯೆಯ ಪ್ರಾಣಿ-ಪಕ್ಷಿಗಳೂ ಸುಟ್ಟು ಬೂದಿಯಾಗಿರುವ ಸಾಧ್ಯತೆಯಿದ್ದು, ಬೆಂಕಿಯನ್ನು ನಂದಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

 

Facebook Comments

comments