UDUPI
ಅನಾಮಿಕ ಅಭಿಮಾನಿಯಿಂದ ರಂಜನಿ ಹೆಬ್ಬಾರ್ ಪ್ರತಿಮೆ
ಉಡುಪಿ : ಸಂಗೀತ ಎಂತವರನ್ನು ಮಂತ್ರ ಮುಗ್ದಗೊಳಿಸುತ್ತದೆ. ಸಂಗೀತಕ್ಕೆ ಅಂತಹದೊಂದು ಶಕ್ತಿ ಇದೆ. ಬದುಕಿದ್ದಾಗ ನಾಡಿನಾದ್ಯಂತ ಹೆಸರು ಮಾಡಿದ್ದ ಗಾಯಕಿಯೊಬ್ಬರು, ತಮ್ಮ ಕಾಲಾನಂತರ ಶಿಲ್ಪಿಯೊಬ್ಬರಿಗೆ ಸ್ಫೂರ್ತಿಯಾಗಿದ್ದಾರೆ.
ಹೆಸರು ವಿಳಾಸ ಹೇಳಲು ಬಯಸದೆ ಅನಾಮಿಕರಾಗಿಯೇ ಇರಲು ಬಯಸಿರುವ ಈ ಶಿಲ್ಪಿ ತನ್ನ ನೆಚ್ಚಿನ ಗಾಯಕಿ ಉಡುಪಿಯ ರಂಜನಿ ಹೆಬ್ಬಾರ್ ಅವರ ಗೌರವಾರ್ಥ ಸುಂದರ ಪ್ರತಿಮೆ ನಿರ್ಮಿಸಿಕೊಟ್ಟಿದ್ದಾರೆ. ರಂಜನಿ ಹೆಬ್ಬಾರ್, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿದ್ದ ಅಪರೂಪದ ಗಾಯಕಿ. ಏಳು ವರ್ಷಗಳ ಹಿಂದೆ ಈಕೆ ಇಹ ಲೋಕದಿಂದ ದೂರವಾದರು. ಆಕೆಯ ಸ್ಮರಣೆಯಲ್ಲಿ ಪ್ರತೀ ವರ್ಷ ಉಡುಪಿಯಲ್ಲಿ ಸಂಗೀತೋತ್ಸವ ನಡೆಸಲಾಗುತ್ತದೆ.
ಟ್ರಸ್ಟ್ ನ ಪ್ರಮುಖರಾದ ವಿ.ಅರವಿಂದ ಹೆಬ್ಬಾರ್ ಮಾತನಾಡಿ ರಂಜನಿ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಆಕೆ ಕೇವಲ ನನ್ನ ಮಗಳಲ್ಲ ಶುದ್ಧ ಸಂಗೀತದ ಅಭಿಮಾನಿಗಳು ಮತ್ತು ಆಕೆಯ ಕಲೆಯನ್ನು ಇಷ್ಟಪಡುವ ಪ್ರತಿಯೊಬ್ಬರ ಮಗಳು, ಈ ಪ್ರತಿಮೆ ಆಕೆಯ ಕಲಾಸೇವೆಯನ್ನು ನಿತ್ಯವೂ ಸ್ಮರಿಸುವುದಕ್ಕೊಂದು ಮಾದ್ಯಮ ಎಂದು ಹೇಳಿದರು. ಈ ವೇಳೆ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಸಂತಲಕ್ಷ್ಮೀ ಹೆಬ್ಬಾರ್, ಸಾರಂಗ ಹೆಬ್ಬಾರ್ ಉಪಸ್ಥಿತರಿದ್ದರು. ಪ್ರತಿಮೆ ಅನಾವರಣದ ಬಳಿಕ ಸ್ವಾಮಿ ಸೂರ್ಯಪಾದರಿಂದ ಸತ್ಸಂಗ ನಡೆಯಿತು.
ಸೆ.1 ರಿಂದ ನಿರಂತರ 13 ದಿನಗಳ ಈ ಸಂಗೀತೋತ್ಸವದಲ್ಲಿ ದೇಶ-ವಿದೇಶಗಳ ಪ್ರಖ್ಯಾತ ಸಂಗೀತ ಕಲಾವಿದರು. ಫೇಸ್ ಬುಕ್ ಲೈವ್ ಮೂಲಕವೇ ಪ್ರತಿದಿನ ಸಂಗೀತ ಕಚೇರಿ ನೀಡುತ್ತಿದ್ದಾರೆ. ಈಗಾಗಲೇ ತಿರುಮೆಗ್ನನಂ ಟಿಪಿಎನ್ ರಮಾನಾಥನ್ ಮತ್ತು ಪಂಡಮಂಗಲಂ ಪಿ.ಜಿ.ಯುವರಾಜ್, ಚೆನ್ನೈನ ಪ್ರಾರ್ಥನಾ ಸಾಯಿ ನರಸಿಂಹನ್, ಬೆಂಗಳೂರಿನ ಸಿದ್ದಾರ್ಥ ಬೆಳ್ಮಣ್ಣು, ಯು.ಎಸ್. ಎ, ಹ್ಯೂಸ್ಟನ್ ನಿಂದ ಕೃತಿ ಭಟ್, ರಮಣಾ ಬಾಲಚಂದ್ರನ್, ಚೆನ್ನೈನ ಸತ್ಯನಾರಾಯಣ, ಬೆಂಗಳೂರಿನ ಸ್ಪೂರ್ತಿ ರಾವ್ , ಐಶ್ವರ್ಯ ವಿದ್ಯಾ ರಘುನಾಥ್, ಚೆನ್ನೈನ ಜೆ.ಬಿ.ಶೃತಿ ಸಾಗರ್, ಮೈಸೂರಿನ ಶ್ರೀಮತಿದೇವಿ, ಅನುಪಮಾ ಭಾಗವತ್, ಕು. ಸಮನ್ವಿ ಅವರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
Facebook Comments
You may like
-
ಲಾರಿ ಚಾಲಕನ ಅವಾಂತರ-ಜನಸಾಮಾನ್ಯ ಪ್ರಾಣ ಉಳಿಸಿದ ಕಾಪು ಎಸೈ ರಾಘವೇಂದ್ರ
-
ಕುಂಜಿಬೆಟ್ಟು ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ ನಾಗರಹಾವಿನ ರಕ್ಷಣೆ
-
ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್
-
ಒಂದೆರಡು ದಿನಗಳಲ್ಲಿ ಎಲ್ಲಾ ಭಿನ್ನಮತ ಶಮನ – ಬಿವೈ ರಾಘವೇಂದ್ರ
-
ಡ್ರೋಣ್ ಮೂಲಕ ಮದುಮಗನ ಕೈಗೆ ಬಂತು ಮಾಂಗಲ್ಯ ಸರ…!!
-
ಬಾರ್ಕೂರಿನಲ್ಲಿ ಶ್ರೀ ಕುಮಾರಸ್ವಾಮಿ ಮೂರ್ತಿಯ ಮೇಲೆ ಹರಿದಾಡಿದ ಸರ್ಪ
You must be logged in to post a comment Login