Connect with us

    LATEST NEWS

    ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಬಂಧಿಸಿ ತನಿಖೆಗೆ ಒಳಪಡಿಸಿ – ಎಸ್ ಡಿಪಿಐ

    ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಬಂಧಿಸಿ ತನಿಖೆಗೆ ಒಳಪಡಿಸಿ – ಎಸ್ ಡಿಪಿಐ

    ಮಂಗಳೂರು ಎಪ್ರಿಲ್ 18: ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ ಜಿಲ್ಲೆಯಲ್ಲಿ ನಡೆದ ಸಂಘಪರಿವಾರದ ಹತ್ಯೆಗಳ ಹಿಂದಿರುವವರ ಬಗ್ಗೆ ಬಹಿರಂಗ ಪಡಿಸುವೆ ಎಂದು ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಎಸ್ ಡಿಪಿಐ ಜಗದೀಶ್ ಅಧಿಕಾರಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

    ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್ ಡಿಪಿಐ ಜಗದೀಶ್ ಅಧಿಕಾರಿ ಮೂಡಬಿದ್ರೆ ಕ್ಷೇತ್ರದ ಬಿಜೆಪಿಯ ಟಿಕೆಟ್ ಕೈ ತಪ್ಪಿದಾಗ ಬೇಸರಗೊಂಡ ಅವರು ಅವರ ಮನಸ್ಸಿನ ಅಂತರಾಳದಲ್ಲಿದ್ದ ಸತ್ಯ ವಿಚಾರಗಳನ್ನು ಬಹಿರಂಗ ಗೊಳಿಸುವ ಮೂಲಕ ಹತ್ಯೆಯ ನೈಜ ಸೂತ್ರಧಾರಿಗಳ ಬಗ್ಗೆ ಹೇಳಿರುವುದು ಸಂಘಪರಿವಾರ ಜಿಲ್ಲೆಯಲ್ಲಿ ನಡೆಸಿರುವ ಹತ್ಯೆಯ ಸಾಕ್ಷಿಯಾಗಿದೆ ಎಂದು ತಿಳಿಸಿದೆ.

    ಜಿಲ್ಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರ ಹತ್ಯೆಯ ಹಿಂದಿರುವವರ ಬಗ್ಗೆ ಬಹಿರಂಗ ಪಡಿಸುವೆ,ಹತ್ಯೆಯ ಹಿಂದೆ ಯಾರಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ ಈ ಬಗ್ಗೆಯೂ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವೆ ಅದಕ್ಕೆ ನನಗೆ ಯಾವುದೇ ಭಯವಿಲ್ಲ ಎಂದು ಜಗದೀಶ್ ಅಧಿಕಾರಿ ಹೇಳಿದ್ದು ಇದು ಹತ್ಯಾ ಪ್ರಕರಣದ ತನಿಖೆಗೆ ಪುಷ್ಟಿ ನೀಡಿದಂತಾಗಿದೆ.

    ನಮ್ಮ ಪಕ್ಷವು ಕಳೆದ ಹಲವು ವರ್ಷಗಳಿಂದ ಹೇಳುತ್ತಾ ಬಂದಿದೆ ಜಿಲ್ಲೆಯಲ್ಲಿ ನಡೆದ ಎಲ್ಲಾ ಹತ್ಯೆಯ ಹಿಂದೆ ಸಂಘಪರಿವಾರ ಇದೆ ಎಂದು ಆದರೆ ಇಲ್ಲಿನ ಸರಕಾರ ಮತ್ತು ಪೊಲೀಸ್ ಇಲಾಖೆ ಸಂಘಪರಿವಾರದ ನಾಯಕರನ್ನು ರಕ್ಷಿಸುವ ನಿಟ್ಟಿನಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ಸುಳ್ಳು ಆರೋಪಗಳನ್ನು ಹಾಕಿ ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡಿದೆ ಇದೀಗ ಹತ್ಯೆಯ ಹಿಂದಿರುವ ಸಂಘಪರಿವಾರದ ಷಡ್ಯಂತ್ರಗಳು ಬಹಿರಂಗಗೊಳ್ಳುತ್ತಿದೆ.

    ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ಜಗದೀಶ್ ಅಧಿಕಾರಿಯನ್ನು ಬಂಧಿಸಿ, ಸಮಗ್ರ ತನಿಖೆಗೆ ಒಳಪಡಿಸಿ ಹತ್ಯೆಯ ಹಿಂದಿರುವ ಎಲ್ಲಾ ಸಂಘಪರಿವಾರದ ವ್ಯಕ್ತಿಗಳನ್ನು ಬಹಿರಂಗ ಪಡಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply