Connect with us

BANTWAL

ಜನಾರ್ಧನ ಪೂಜಾರಿ ಭೇಟಿ ಮಾಡಿ ಆಶೀರ್ವಾದ ಪಡೆದ ರಮಾನಾಥ ರೈ

ಜನಾರ್ಧನ ಪೂಜಾರಿ ಭೇಟಿ ಮಾಡಿ ಆಶೀರ್ವಾದ ಪಡೆದ ರಮಾನಾಥ ರೈ

ಬಂಟ್ವಾಳ ಎಪ್ರಿಲ್ 18: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆ ಬಂಟ್ವಾಳ ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ ಅವರ ಇಂದು ಕಾಂಗ್ರೇಸ್ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ಆಶೀರ್ವಾಜ ಪಡೆದರು.

ಇಂದು ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಲ್ಲಿರುವ ಜನಾರ್ಧನ ಪೂಜಾರಿ ಅವರ ಮನೆಗೆ ಭೇಟಿ ನೀಡಿದ ರಮಾನಾಥ ರೈ ಪೂಜಾರಿ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾತುಕತೆ ನಡೆಸಿದ ರಮಾನಾಥ ರೈ ನಾಮಪತ್ರ ಸಲ್ಲಿಕೆಗೆ ಮುಂಚೆ ಪೂಜಾರಿ ಅವರ ಆಶೀರ್ವಾದವನ್ನು ಪಡೆದರು.

ರಮಾನಾಥ ರೈ ಅವರ ಪೂಜಾರಿ ಭೇಟಿ ಕುತೂಹಲ ಮೂಡಿಸಿದ್ದು, ರಮಾನಾಥ ರೈ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದ ಪೂಜಾರಿ ಅವರ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.