Connect with us

    MANGALORE

    ಕಾಣೆಯಾದ ಗಿಣಿ ಹುಡುಕಾಟದಲ್ಲಿ ನಾಪತ್ತೆ ಪೋಸ್ಟರ್ ಅಂಟಿಸುತ್ತಿರುವ ಯುವಕ

    ಕಾಣೆಯಾದ ಗಿಣಿ ಹುಡುಕಾಟದಲ್ಲಿ ನಾಪತ್ತೆ ಪೋಸ್ಟರ್ ಅಂಟಿಸುತ್ತಿರುವ ಯುವಕ

    ಮಂಗಳೂರು ಎಪ್ರಿಲ್ 18: ಗಿಣಿ ಕಾಣೆಯಾದದಕ್ಕೆ ಅನ್ನ ನೀರು ಬಿಟ್ಟು ಬೀದಿ ಬೀದಿಗಳಲ್ಲಿ ನಾಪತ್ತೆ ಪೋಸ್ಟರ್ ಅಂಟಿಸುತ್ತ ಗಿಣಿಯ ಹುಡುಕಾಟದಲ್ಲಿರುವ ಯುವಕನೋರ್ವ ಮಂಗಳೂರಿನಲ್ಲಿದ್ದಾರೆ.

    ಗಿಣಿ ಹುಡುಕಾದಲ್ಲಿರುವ ಯುವಕನ ಹೆಸರು ಅಕ್ಬರ್, ಮಂಗಳೂರಿನ ಹಳೇ ಬಂದರಿನ ನಿವಾಸಿಯಾಗಿರುವ ಈತ ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ, ಈ ಹಿನ್ನಲೆಯಲ್ಲಿ ಮನೆಯಲ್ಲಿ ‘ಆಫ್ರಿಕನ್ ಗ್ರೇ ಪ್ಯಾರೆಟ್’ ಪ್ರಭೇದದ ಅಪೂರ್ವ ಗಿಣಿಯನ್ನು ಸಾಕುತ್ತಿದ್ದರು. ಈ ಗಿಣಿ ಮನೆಯ ಸದಸ್ಯನಂತೆ ಇದ್ದು ಸ್ವಚ್ಚಂದವಾಗಿ ಮನೆಯೊಳಗಡೆ ಹಾರಾಡುತ್ತಾ, ತನ್ನದೆ ಭಾಷೆಯಲ್ಲಿ ಮಾತನಾಡುತ್ತಿತ್ತು.

    ಆಫ್ರಿಕನ್ ಗ್ರೇ ಪ್ಯಾರಟ್ ಪ್ರಭೇದದ ಈ ಹಕ್ಕಿಗೆ ‘ಟಿಂಟೂನ್’ಎಂದು ಹೆಸರನ್ನು ಕೂಡ ಇಡಲಾಗಿತ್ತು. ಸಾವಿರಾರು ಮೌಲ್ಯ ಬೆಲೆ ಬಾಳುವ ಈ ಗಿಣಿ ಮಂಗಳೂರಿನಲ್ಲಿ ಅಪರೂಪದ್ದಾಗಿದೆ. ಅಕ್ಬರ್ ಗಿಣಿಗೆ ಮಲಗುವುದಕ್ಕೊಸ್ಕರ ತನ್ನ ಮಂಚದ ಕೆಳೆಗೆ ವ್ಯವಸ್ಥೆ ಮಾಡಿದ್ದ.

    ಇಷ್ಟೋಂದು ಪ್ರೀತಿಯಿಂದ ಸಾಕಿ ಸಲಹಿ, ಪ್ರೀತಿ ವಾತ್ಸಲ್ಯ ತೋರಿಸಿದ ಗಿಣಿ ಕಾಣದಂತೆ ಮಾಯವಾಗಿದೆ. ನಾಪತ್ತೆಯಾದ ಗಿಣಿಯನ್ನುಹುಡುಕಿಕೊಡಿ ಎಂದು ಈ ಕುಟುಂಬ ಮಂಗಳೂರು ನಗರದ ಹಲವು ಬೀದಿಗಳಲ್ಲಿ ನಾಪತ್ತೆ ಪೋಸ್ಟರ್ ಅಂಟಿಸಿ ಗಿಣಿಯ ಹುಡುಕಾಟದಲ್ಲಿದೆ. ಕಳೆದ ಒಂದು ತಿಂಗಳಿನಿಂದ ಈ ಕುಟುಂಬ ಗಿಣಿಯ ಹುಡುಕಾಟದಲ್ಲಿದ್ದು, ಗಿಣಿಯೊಂದಿಗೆ ಅತ್ಯಂತ ಆತ್ಮೀಯತೆ ಬೆಳೆಸಿಕೊಂಡಿದ್ದ ಮನೆಯ ಸದಸ್ಯ ಅಕ್ಬರ್ ಅಕ್ಷರಶ: ತಬ್ಬಲಿಯಂತೆ ದುಖಿಸುತ್ತಿದ್ದಾರೆ.

    ಗಿಣಿ ನಾಪತ್ತೆಯಾದ ಬಳಿಕ ಕೆಲಸ ಕಾರ್ಯಗಳಲ್ಲಿ ಉಲ್ಲಾಸ ಕಳ್ಕೊಂಡು ಸರಿಯಾಗಿ ಅನ್ನಾಹಾರಗಳನ್ನೂ ಸೇವಿಸದೆ ಗಿಣಿ ಹುಡುಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply