Connect with us

    DAKSHINA KANNADA

    ಪುತ್ತೂರಿಗೆ ಬಂದ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಆಮಂತ್ರಣ ಅಕ್ಷತೆ

    ಪುತ್ತೂರು ನವೆಂಬರ್ 27: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಜನವರಿ 22, 2024 ರಂದು ಭಗವಾನ್ ರಾಮನ ವಿಗ್ರಹದ “ಪ್ರಾಣ ಪ್ರತಿಷ್ಠಾ ಮಹೋತ್ಸವ” ನಡೆಯಲಿದ್ದು, ಇದಕ್ಕೆ ಸಿದ್ದತೆಗಳು ಭರದಿಂದ ಸಾಗಿದೆ. ಈ ನಡುವೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ದೇವತಾ ಕಾರ್ಯದಲ್ಲಿ ದೇಶದ ಎಲ್ಲಾ ಜನರನ್ನು ಸೇರಿಸಿಕೊಳ್ಳಲು ತೀರ್ಮಾನಿಸಿದ್ದು, ಅದರಂತೆ ಶ್ರೀರಾಮ ಜನ್ಮಭೂಮಿಯ ಆಮಂತ್ರಣ ಅಕ್ಷತೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ದೇಶದಲ್ಲಿರುವ ಪ್ರತಿಯೊಬ್ಬ ಹಿಂದೂವಿನ ಮನೆಗೂ ಶ್ರೀರಾಮನ ಆಮಂತ್ರಣ ಅಕ್ಷತೆಯನ್ನು ನೀಡಲಾಗುತ್ತದೆ.


    ಅದರಂತೆ ಇಂದು ಪುತ್ತೂರಿಗೆ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಆಮಂತ್ರಣ ಅಕ್ಷತೆ ಆಗಮಿಸಿದ್ದು, ನೂರಾರು ಜನರು ಅಕ್ಷತೆಯನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸ್ವಾಗತಿಸಿದರು. ಅಕ್ಷತೆ ಕುಂಭ-ಮೇಳ ಸ್ವಾಗತದೊಂದಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿದ್ದು, ಅಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಇರಿಸಿ ಅಕ್ಷತೆಗೆ ಪೂಜೆ ಸಲ್ಲಿಸಲಾಯಿತು.


    ನವಂಬರ್ 30 ರ ತನಕ ದೇವಸ್ಥಾನದ ಗರ್ಭಗುಡಿಯಲ್ಲೇ ಇರಲಿರುವ ಅಕ್ಷತೆ, ಬಳಿಕ ನವೆಂಬರ್ 30 ರಂದು ರಾಮಜನ್ಮ ಭೂಮಿ ಕ್ಷೇತ್ರ ಟ್ರಸ್ಟ್ ಸಮಿತಿಯ ತಾಲೂಕು ಘಟಕದ ಸಭೆ ನಡೆಯಲಿದೆ. ಆ ಸಭೆಯಲ್ಲಿ ತಾಲೂಕು ಘಟಕ ಮತ್ತು ಗ್ರಾಮ ಘಟಕಗಳಿಗೆ ಅಕ್ಷತೆಯ ಹಸ್ತಾಂತರ ಮಾಡಲಾಗುವುದು ಬಳಿಕ ಜನವರಿ 1 ರ ತನಕ ಆಯಾಯ ಗ್ರಾಮದ ದೈವ ಮತ್ತು ದೇವಸ್ಥಾನದಲ್ಲಿ ಇರಲಿದೆ ಅಕ್ಷತೆ, ಜನವರಿ 1 ರಿಂದ 15 ರಿಂದ ಪ್ರತೀ ಹಿಂದೂ ಮನೆಗಳಿಗೆ ಅಕ್ಷತೆ ಮುಟ್ಟಲಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply