DAKSHINA KANNADA
ಜ್ವರ ಎಂದು ಬಂದ ವ್ಯಕ್ತಿಗೆ ಅಪರೇಷನ್ – ಆಪರೇಷನ್ ಬಳಿಕ ರೋಗಿ ಸಾವು- ಖಾಸಗಿ ಆಸ್ಪತ್ರೆ ವಿರುದ್ದ ಸಂಬಂಧಿಕರ ಆಕ್ರೋಶ
ಪುತ್ತೂರು ಮೇ 16: ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷದಿಂದಾಗಿ ಈ ಸಾವು ಸಂಭವಿಸಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಮೃತರನ್ನು ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ(47)ಎಂದು ಗುರುತಿಸಲಾಗಿದೆ. ಕೃಷ್ಣಪ್ಪ ಗೌಡ ಅವರು ವಿಪರೀತ ಜ್ವರವಿದ್ದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ನಾಲಿಗೆಯ ಅಡಿ ಭಾಗದಲ್ಲಿ ಗಡ್ಡೆ ಇದ್ದು ಅದನ್ನು ತೆಗೆಯಬೇಕೆಂದು ಹೇಳಿದ್ದಾರೆ. ಗಡ್ಡೆ ತೆಗೆಯಲು ಅಪರೇಷನ್ ಮಾಡಿಸಲು ಕೃಷ್ಣಪ್ಪ ಗೌಡ ಅವರ ಹೆಂಡತಿ ಸರೋಜಿನಿ ಮತ್ತು ಅತ್ತಿಗೆಯ ಸಹಿ ಹಾಕಿಸಿಕೊಂಡ ವೈದ್ಯರು ಅಪರೇಷನ್ ಮಾಡಿದ್ದಾರೆ. ಆದರೆ ಅಪರೇಷನ್ ಮಾಡಿದ ಬಳಿಕ ಕೃಷ್ಣಪ್ಪ ಗೌಡ ಅವರು ಸಾವನಪ್ಪಿದ್ದು, ವೈದ್ಯರ ನಿರ್ಲಕ್ಷದಿಂದಲೇ ಸಾವನಪ್ಪಿದ್ದಾರೆ ಎಂದು ರೊಚ್ಚಿಗೆದ್ದ ಸಂಬಂಧಿಕರು, ಸಾರ್ವಜನಿಕರು ರಾತ್ರೋರಾತ್ರಿ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದರು. ಕೃಷ್ಣಪ್ಪ ಗೌಡ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು, ವೈದ್ಯರ ಎಡವಟ್ಟಿನಿಂದಲೇ ಈ ಸಾವು ಎಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ರವಾನಿಸಲಾಗಿದೆ.
You must be logged in to post a comment Login