Connect with us

KARNATAKA

ಉಡುಪಿ : ಜೀವನದ ಪಯಣದಲ್ಲೂ ಒಂದೂ.. ಸಾವಿನಲ್ಲೂ ಒಂದಾದ ದಂಪತಿ..!

ಉಡುಪಿ : ಜೀವನದ ಪಯಣದಲ್ಲೂ ಒಂದಾಗಿದ್ದ ದಂಪತಿ ಸಾವಿನಲ್ಲೂ ಒಂದಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಶುಕ್ರವಾರ ನಡೆದಿದೆ. ಹೆಂಡತಿ ನಿಧನರಾದ ಒಂದೇ ದಿನದ ಅಂತರದಲ್ಲಿಗಂಡನೂ ಇಹ ಲೋಕ ತ್ಯಜಿಸಿದ್ದು  ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಉಡುಪಿ ಕಾರ್ಕಳ ತಾಲೂಕಿನ ವಿವಿಧ ಶಾಲೆಗಳಲ್ಲಿ ದಶಕಗಳ ಕಾಲ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದ ಬೋಳಾರ್ ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯ ಲಾರೆನ್ಸ್ ಡೆಸಾರವರ ಪತ್ನಿ, ಜೂಲಿಯಾನ ಹೆಲೆನ್ ರೆಬೆಲ್ಲೋ ಡೆಸಾ ಹೃದಯಾಘಾತದಿಂದ ನಿಧನರಾಗಿದ್ದರು. ಜೂಲಿಯಾನ ಟೀಚರ್ ನಿಧನರಾಗಿದ್ದ ಸುದ್ದಿ ಕುಟುಂಬ ಹಾಗೂ ಅಪಾರ ವಿದ್ಯಾರ್ಥಿ ಬಳಗವನ್ನು ನೋವಿಗೀಡು ಮಾಡಿತ್ತು. ಇದೀಗ ಈ ದುಖಃದ  ಬೆನ್ನಲ್ಲೇ ಮತ್ತೊಂದು ಅಘಾತಕಾರಿ ಘಟನೆ ನಡೆದಿದ್ದು  ಜೂಲಿಯಾನ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್‌ ಡೇಸ (62)ಅವರು ಅಸೌಖ್ಯದಿಂದ ನಿಧನ ಹೊಂದಿದ್ದಾರೆ.  ಪತ್ನಿಯ ಸಾವಿನಿಂದ ಆಘಾತಕ್ಕೊಳಗಾದ ಪತಿ ಲಾರೆನ್ಸ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ  ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಲಾರೆನ್ಸ್ ಡೆಸಾ, ಸ್ಥಳೀಯ ಲಯನ್ಸ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಸಕ್ರೀಯ ಪದಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.  ಮೃತರು ಪುತ್ರ, ಪುತ್ರಿ ಹಾಗೂ ಅಪಾರು ಬಂಧು ವರ್ಗವನ್ನು ಅಗಲಿದ್ದಾರೆ. ಇವರಿಬ್ಬರ ಅಗಲಿಕೆಗೆ ಕಾರ್ಕಳದ ಗಣ್ಯರು, ರಾಜಕೀಯ ಮುಖಂಡರು, ಧರ್ಮ ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
1 Comment

1 Comment

  1. Pingback: ಕಾರ್ಕಳ : ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಜೂಲಿಯಾನ ಟೀಚರ್ ಇನ್ನಿಲ್ಲ..!! - themangaloremirror.in

Leave a Reply

Your email address will not be published. Required fields are marked *