LATEST NEWS
ಕಾಲಿನ ಆಣಿ, ನರುಳ್ಳೆ ಮತ್ತು ಚರ್ಮದ ಕೆಡುಗಳಿಗೆ ಉಚಿತ ಚಿಕಿತ್ಸೆ
ಕಾಲಿನ ಆಣಿ, ಚರ್ಮದ ಕೆಡು ಇತ್ಯಾದಿ, ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆಗಳು. ಸಣ್ಣದಾಗಿ ಕಾಣುವ ಈ ಸಮಸ್ಯೆಗಳು ಕೆಲವೊಮ್ಮೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತವೆ. ವೈದ್ಯರ ಬಳಿ ತೆರಳಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾವು ಕೆಲವೊಮ್ಮೆ ಉದಾಸೀನ ತೊರಿಸುತ್ತೇವೆ. ಮತ್ತೆ ಕೆಲವೊಮ್ಮೆ ಭಯ ಅಥವಾ ಆರ್ಥಿಕ ಅಡಚಣೆಗಳೂ ಈ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳದಂತೆ ಮಾಡುತ್ತವೆ.
ನಗರದ ಪ್ರಸಿದ್ಧ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಆಣಿ, ನರುಳ್ಳೆ, ಚರ್ಮದ ಕೆಡು ಮುಂದಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದೇ ಬರುವ ರವಿವಾರ 1-12-2024 ರಂದು ಮೊರ್ಗನ್ಸ್ ಗೇಟ್ನಲ್ಲಿರುವ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದ ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ.
ಮಂಗಳೂರಿನ ಜನತೆ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕಾಗಿ ಈಝೀ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜನಾರ್ಧನ ಹೆಬ್ಬಾರ್ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಈಝೀ ಆಯುರ್ವೆದ ಆಸ್ಪತ್ರೆ
ಮೊರ್ಗನ್ಸ್ ಗೇಟ್, ಮಂಗಳೂರು.
8867385567
8618898900
1 Comment