LATEST NEWS
ಕಾರ್ಕಳ : ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಜೂಲಿಯಾನ ಟೀಚರ್ ಇನ್ನಿಲ್ಲ..!!
ಕಾರ್ಕಳದ ವಿವಿಧ ಶಾಲೆಗಳಲ್ಲಿ ದಶಕಗಳ ಕಾಲ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಜೂಲಿಯಾನ ಟೀಚರ್ ನಿಧನರಾಗಿದ್ದಾರೆ.
ಕಾರ್ಕಳ : ಕಾರ್ಕಳದ ವಿವಿಧ ಶಾಲೆಗಳಲ್ಲಿ ದಶಕಗಳ ಕಾಲ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಜೂಲಿಯಾನ ಟೀಚರ್ ನಿಧನರಾಗಿದ್ದಾರೆ.
ಇಂದು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 56 ವರ್ಷದ ಜೂನಿಯಾನ ಟೀಚರ್ ಕಳೆದ 2 ವರ್ಷಗಳಿಂದ ಕಾರ್ಕಳದ ಬೈಲೂರು ಮೇನ್ ಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರ ನಿವಾಸಿಯಾದ ಜ್ಯೂಲಿಯಾನ ಟೀಚರ್ ಕಾರ್ಕಳ ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದು ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ವಿದೇಶದಲ್ಲಿರುವುದರಿಂದ ಅವರ ಬರುವಿಕೆಗಾಗಿ ಕಾಯಲಾಗುತ್ತಿದ್ದು ಅಂತ್ಯಸಂಸ್ಕಾರ ಶನಿವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Shocking news…
1 Comment