Connect with us

    LATEST NEWS

    ಡೇರ್​ ಚಾಲೆಂಜ್ ಗಾಗಿ ಲೈವ್​ನಲ್ಲಿ ಬೆತ್ತಲಾದ 14ರ ಬಾಲಕಿ: ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್!​

    ಮುಂಬೈ, ಫಬ್ರವರಿ 07:  ಲಾಕ್​ಡೌನ್​ನಿಂದಗಿ ಶಾಲಾ-ಕಾಲೇಜುಗಳು ಅನಿವಾರ್ಯವಾಗಿ ಆನ್​ಲೈನ್​ ಕ್ಲಾಸ್​ ಮೊರೆ ಹೋಗಬೇಕಾಗಿ ಬಂತು. ಆದರೆ, ಆನ್​ಲೈನ್​ ಕ್ಲಾಸ್​ ಭಾಗವಾಗಿ ಮಕ್ಕಳ ಕೈಯಲ್ಲಿ ಸ್ಮಾರ್ಟ್​ಫೋನ್​ ಇರುವುದು ಸಾಮಾನ್ಯವಾಗಿ ಬಿಟ್ಟಿದೆ. ಆನ್​ಲೈನ್​ ಕ್ಲಾಸ್​ ಶುರುವಾದಗಿನಿಂದ ಒಂದಲ್ಲ ಒಂದು ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಥದ್ದೇ ಮತ್ತೊಂದು ಘಟನೆ ಮುಂಬೈನಲ್ಲಿ ನಡೆದಿದೆ.

    ಸ್ಮಾರ್ಟ್​ಫೋನ್​ ಎಷ್ಟು ಉಪಯುಕ್ತವೂ ಅಷ್ಟೇ ಅಪಾಯಕಾರಿಯು ಹೌದು. ಅದರಲ್ಲೂ ಇಂಟರ್ನೆಟ್​ ಇದ್ದರೆ ಅದರ ಪ್ರಭಾವ ಮತ್ತಷ್ಟು ಹೆಚ್ಚಾಗುತ್ತದೆ. 13 ವರ್ಷದ ಬಾಲಕನೊಬ್ಬ 14 ವರ್ಷದ ಬಾಲಕಿಯನ್ನು ಬೆತ್ತಲೆಯಾಗಿಸಿ, ಅದನ್ನು ರೆಕಾರ್ಡ್​ ಮಾಡಿ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಮುಂಬೈನ ಪಶ್ಚಿಮ ಉಪನಗರದಲ್ಲಿ ವಾಸವಿರುವ 14 ವರ್ಷದ ಬಾಲಕಿ ಇನ್​​ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದಾಳೆ. ಲಾಕ್​ಡೌನ್​ ಸಮಯದಲ್ಲಿ ಅತಿಹೆಚ್ಚು ಸಮಯ ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿದ್ದಳು. ಅದೇ ಸಮಯದಲ್ಲಿ ಅಪರಿಚಿತ ಬಾಲಕನಿಂದ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸಿದಳು. ಹಿಂದು-ಮುಂದು ನೋಡದೇ ರಿಕ್ವೆಸ್ಟ್​ಗೆ ಓಕೆ ಎಂದಳು. ಇದಾದ ಬಳಿಕ ಇಬ್ಬರ ನಡುವೆ ಚಾಟಿಂಗ್​ ಶುರುವಾಯಿತು. ಕೊನೆಗೆ ಇಬ್ಬರು ‘ಟ್ರೂಥ್​ ಆರ್​ ಡೇರ್​’ ಎಂಬ ಆನ್​ಲೈನ್​ ಗೇಮ್​ ಶುರು ಮಾಡಿದರು.

    ಒಂದು ದಿನ ‘ಡೇರ್​ ಚಾಲೆಂಜ್​’ ಭಾಗವಾಗಿ ಬಾಲಕ, ಬಾಲಕಿಗೆ ಒಂದು ಮಸೇಜ್​ ಕಳುಹಿಸುತ್ತಾನೆ. ಬಾಲಕನ ಆದೇಶದಂತೆ ಬಾಲಕಿ ತನ್ನ ಬಟ್ಟೆಯನ್ನು ಕಳಚಿ ಬೆತ್ತಲೆಯಾಗಬೇಕು. ಈ ರೀತಿ ಮಾಡಿದರೆ ಮುಂದೆ ಯಾವ ಪರಿಣಾಮ ಬೀರಲಿದೆ ಎಂಬ ಅರಿವಿಲ್ಲದೆ, ಗೇಮ್​ನ ನಿಯಮಾನುಸಾರ ಬಾಲಕಿ ತನ್ನ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿದ್ದಾಳೆ. ಇದೆಲ್ಲವೂ ಸಹ ಲೈವ್​ ರೆಕಾರ್ಡ್​ ಆಗುತ್ತಿರುತ್ತದೆ. ಆದರೆ, ಬಾಲಕಿಗೆ ಇದರ ಅರಿವೇ ಇರುವುದಿಲ್ಲ. ಇದಾದ ಬಳಿಕ ಮತ್ತೊಮ್ಮೆ ಬೆತ್ತಲಾಗುವಂತೆ ಬಾಲಕ ಹೇಳುತ್ತಾನೆ. ಆದರೆ, ಬಾಲಕಿ ನಿರಾಕರಿಸಿದಾಗ ಬ್ಲ್ಯಾಕ್​ಮೇಲ್​ ಮಾಡಲು ಆರಂಭಿಸುತ್ತಾನೆ. ರೆಕಾರ್ಡ್​ ಮಾಡಿರುವ ವಿಡಿಯೋವನ್ನು ವೈರಲ್​ ಮಾಡುವುದಾಗಿ ಬೆದರಿಸುತ್ತಾನೆ ಮತ್ತು ವಿಡಿಯೋವನ್ನು ಬಾಲಕಿಗೆ ಕಳುಹಿಸುತ್ತಾನೆ.

    ಇದಾದ ಬಳಿಕ ಬಾಲಕಿ ಬೇಸರದಲ್ಲಿರುವುದನ್ನು ಗಮನಿಸುವ ಪಾಲಕರು ಏನಾಯಿತು ಎಂದು ಕೇಳಿದಾಗ ಎಲ್ಲವನ್ನು ವಿವರಿಸುತ್ತಾಳೆ. ಬಳಿಕ ಪಾಲಕರು ಪೊಲೀಸರಿಗೆ ದೂರು ನೀಡುತ್ತಾರೆ. ಬಳಿಕ ಐಪಿ ಅಡ್ರೆಸ್​ ಸಹಾಯದಿಂದ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಬಾಲಕನನ್ನು ಪತ್ತೆಹಚ್ಚುತ್ತಾರೆ.

    ಆಗಲೇ ಅವರಿಗೆಲ್ಲ ಗೊತ್ತಾಗಿದ್ದು ಇಷ್ಟೆಲ್ಲಾ ಮಾಡಿದ್ದು 13 ವರ್ಷದ ಬಾಲಕನೆಂದು. ಇನ್ನು ಬಾಲಕನು ಸಹ ಬಾಲಕಿ ವಾಸವಿರುವ ಏರಿಯಾದವನೆ. ಅಲ್ಲದೆ, ಆತನ ಬಾಲಕಿಯ ಕ್ಲಾಸ್​ಮೇಟ್​ ಸಹ ಹೌದು. ಇದೆವಲ್ಲವನ್ನು ತಿಳಿದ ಬಾಲಕನ ಪಾಲಕರಿಗೆ ಒಮ್ಮೆ ಆಘಾತವಾಗುತ್ತದೆ. ಆನ್​ಲೈನ್​ ಕ್ಲಾಸ್​ ನೆಪದಲ್ಲಿ ಮಕ್ಕಳು ಮಾಡುತ್ತಿರುವ ಕೆಲಸವನ್ನು ನೋಡಿ ಎಲ್ಲರೂ ದಿಗ್ಭ್ರಾಂತಗೊಳ್ಳುತ್ತಾರೆ.

    ಕೊನೆಗೆ ಪೊಲೀಸರು ಮಕ್ಕಳಿಬ್ಬರ ಪಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಕ್ಕಳು ಏನು ಮಾಡುತ್ತಿದ್ದಾರೆ? ಮೊಬೈಲ್​ನಲ್ಲಿ ಏನು ನೋಡುತ್ತಿದ್ದಾರೆ ಎಂದು ಆಗಾಗ ನೋಡಿಕೊಳ್ಳಬೇಕು. ಇದು ಪಾಲಕರ ಜವಾಬ್ದಾರಿಯೂ ಹೌದು ಎಂದು ಪೊಲೀಸರು ಪಾಲಕರಿಗೆ ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ. 

    Share Information
    Advertisement
    Click to comment

    You must be logged in to post a comment Login

    Leave a Reply