FILM
ಸೆಕ್ಸ್ ವಿಡಿಯೋ ಮಾಡಿ ವೆಬ್ ಸೈಟ್ ಗೆ ಅಪ್ಲೋಡ್..ಹಾಟ್ ತಾರೆ ಆರೆಸ್ಟ್
ಮುಂಬೈ, ಫೆಬ್ರವರಿ 07: ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ನಟಿ ವಂದನಾ ತಿವಾರಿ (ಗೆಹಾನಾ ವಶಿಷ್ಠ) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಧ್ಯ ಪ್ರದೇಶ ಮೂಲದ ಗೆಹನಾ ಹಾಟ್ ತಾರೆ ಎಂದು ಗುರುತಿಸಿಕೊಂಡಿದ್ದು, ತನ್ನ ಬೋಲ್ಡ್ ಅವತಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ್ದರು. ಇದೀಗ ವೆಬ್ ಸೈ್ ಒಂದಕ್ಕೆ ಸೆಕ್ಸ್ ವಿಡಿಯೋ ಅಪಲೋಡ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ,
ದೇಶದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡುವುದು ಅಪರಾಧ. ಪೊಲೀಸರ ಪ್ರಕಾರ, ವಂದನಾ ತಿವಾರಿ ಪೋರ್ನ್ ವಿಡಿಯೋವನ್ನು ಚಿತ್ರೀಕರಿಸಿ ಪೋರ್ನ್ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಮುಂಬೈ ಪೊಲೀಸರು ನಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2012 ರ ಮಿಸ್ ಏಷ್ಯಾ ಬಿಕಿನಿ ಸ್ಪರ್ಧೆಯಲ್ಲಿ ವಂದನಾ ವಿಜೇತರಾಗಿದ್ದಾರೆ. ಏಕ್ತಾ ಕಪೂರ್ ಅವರ ವೆಬ್ ಸರಣಿ ‘ಗಂದಿಬಾತ್’ ನ ನಾಯಕಿಯರಲ್ಲಿ ವಂದನಾ ತಿವಾರಿ ಒಬ್ಬರು. ಅವರು ಇಷ್ಕ್ ಮತ್ತು ಲಕ್ನೋ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಸಿನೆಮಾಗಳಲ್ಲಿ ಹಾಟ್ ಅವತಾರಗಳಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದ ಇವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ.
You must be logged in to post a comment Login