Connect with us

KARNATAKA

ಚೆನ್ನೈನಲ್ಲಿ ಅಪಹರಣಕ್ಕೊಳಗಾದ ನೌಕಾಪಡೆ ಅಧಿಕಾರಿಯನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು

ಪಾಲ್ಘರ್, ಫೆಬ್ರವರಿ 07 : ಚೆನ್ನೈನಲ್ಲಿ ಅಪಹರಣಕ್ಕೊಳಗಾಗಿದ್ದ 26 ವರ್ಷದ ನೌಕಾಪಡೆಯ ಅಧಿಕಾರಿಯನ್ನು ದುಷ್ಕರ್ಮಿಗಳು ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದು, ತೀವ್ರ ಗಾಯಗೊಂಡಿದ್ದ ನೌಕಾಧಿಕಾರಿ ಶನಿವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ತೀವ್ರವಾಗಿ ಗಾಯಗೊಡಿದ್ದ ಜಾರ್ಖಂಡ್​​ನ ರಾಂಚಿ ಮೂಲದ ಸೂರಜ್ ಕುಮಾರ್ ದುಬೆ ಅವರು ಮುಂಬೈನ ನ್ಯಾವಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೊಯಮತ್ತೂರ್​ ವಿಭಾಗದ ಭಾರತೀಯ ನೌಕಾದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೂರಜ್ ಕುಮಾರ್, ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ಚೆನ್ನೈಗೆ ಬಂದಿದ್ದರು. ರಾತ್ರಿ 9 ಗಂಟೆ ಗೆ ಗನ್​ ತೋರಿಸಿ, ಮೂವರು ದುಷ್ಕರ್ಮಿಗಳು ವಿಮಾನ ನಿಲ್ದಾಣದಿಂದ ಸೂರಜ್​ರನ್ನು ಅಪಹರಿಸಿದ್ದರು. ಜೊತೆಗೆ 10 ಲಕ್ಷ ರೂಗಳಿಗೆ ಬೇಡಿಕೆಯಿಟ್ಟಿದ್ದರೆಂದು ತಿಳಿದುಬಂದಿದೆ.

ಅಪಹರಿಸಿದ ನಂತರ ಚೆನ್ನೈನಲ್ಲಿ ಮೂರು ದಿನಗಳ ಬಂಧಿಸಿಟ್ಟಿದ್ದು, ಬಳಿಕ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ತಲಸಾರಿ ಪ್ರದೇಶದ ವೆಜ್ಜಿ ಎಂಬಲ್ಲಿಗೆ ಸ್ಥಳಾಂತರಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಸೂರಜ್​ನನ್ನು ಕೈಕಾಲು ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ದುಬೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಶೇ. 90 ರಷ್ಟು ಗಾಯಗಳಾಗಿದ್ದ ಅವರನ್ನು ಮುಂಬೈನ ನ್ಯಾವಿ​ ಆಸ್ಪತ್ರೆ ದಾಖಲಿಸಲಾಯಿತಾದರೂ, ದಾರಿ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸ್ ಅಧಿಕಾರಿ ನವಾಡ್ಕರ್ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *