KARNATAKA
ವಿಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಮಗು ಸಾವು…!!
ತೀರ್ಥಹಳ್ಳಿ: ಎಳೆಯ ಮಕ್ಕಳನ್ನು ಎಷ್ಟು ಜಾಗೃತೆ ಮಾಡಿದರೂ ಸಾಕಾಗುವುದಿಲ್ಲ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ. ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಒಂದು ವರ್ಷದ ಮಗು ಸಾವನಪ್ಪಿದೆ. ತಾಲೂಕಿನ ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆದೂರಿನ ಅರ್ಚನಾ ಸಂದೇಶ್ ದಂಪತಿಗಳ ಪುತ್ರ ಒಂದು ವರ್ಷದ ಮಗು ಶ್ರೀಹಾನ್ ಎಂದು ಗುರುತಿಸಲಾಗಿದೆ.
ಸಂದೇಶ್ ದೂರದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಸಂದರ್ಭ ಮಗು ಮತ್ತು ತಾಯಿಯನ್ನು ಹೆದೂರಿನಲ್ಲಿ ಬಿಟ್ಟಿದ್ದರು. ನಿನ್ನೆಯಷ್ಟೇ ಸಂದೇಶ್ ಫೋನ್ ಮಾಡಿ ಬೆಂಗಳೂರಿಗೆ ಕದುಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ ವಿದಿಯಾಟ ಮಗು ಅಡಿಕೆ ನುಂಗಿ ಶನಿವಾರ ಅಸುನಿಗಿದೆ. ಈ ಮಗು ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ಪ್ರಥಮ ಬಹುಮಾನದ ಜೊತೆಗೆ ನಗದು ಪುರಸ್ಕಾರ ಕೂಡ ಗಳಿಸಿತ್ತು ಎನ್ನಲಾಗಿದೆ.
ಬೆಳಿಗ್ಗೆ ಮನೆಯಲ್ಲಿ ಆಟವಾಡುತ್ತಿದ್ದ ಶ್ರೀಹಾನ್ ಎಲೆ ಅಡಿಕೆ ತಟ್ಟೆಯಲ್ಲಿದ್ ಅಡಿಕೆಯನ್ನು ನುಂಗಿದ್ದಾನೆ. ಕೂಡಲೇ ಉಸಿರುಕಟ್ಟಿದಂತಾಗಿ ಮುಗು ಒದ್ದಾಡಿದೆ. ಈ ಹಿನ್ನಲೆ ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನಪ್ಪಿದೆ.