KARNATAKA
ಮದುವೆಯಲ್ಲಿ ಪೋಟೋಗ್ರಾಫರ್ ಗೆ ಬಿತ್ತು ಏಟು..ಕಾರಣ ಏನು ಗೊತ್ತಾ….?
ಬೆಂಗಳೂರು: ಮದುವೆ ಸಮಾರಂಭದಲ್ಲಿ ಪೋಟೋಗ್ರಾಫರ್ ಗಳ ಕೆಲಸ ಕೆಲವೊಮ್ಮೆ ಮಚ್ಚುಗೆಗೆ ಪಾತ್ರವಾದರೆ. ಕೆಲವೊಮ್ಮೆ ನಗೆಪಾಟಲಿಗೆ ಒಳಗಾಗುವ ಉದಾಹರಣೆಗಳು ಇದೆ. ಅಂತಹದೊಂದು ಸನ್ನಿವೇಶ ಮದುವೆ ಮನೆಯಲ್ಲಿ ನಡೆದಿದ್ದು, ತುಂಬಾ ಸಿರಿಯಸ್ ಆದ ವಿಚಾರ ಕೊನೆಗೆ ನಗೆಗಡಲಲ್ಲೇ ಅಲೆಯಂತೆ ಮಾಯವಾಗುವಂತೆ ಮಾಡಿದೆ. ಸನ್ನಿವೇಶದ ವಿಡಿಯೋ ಈಗ ವೈರಲ್ ಆಗಿದೆ.
ವೈರಲ್ ಆಗಿರೋ ವಿಡಿಯೋ ಮಾತ್ರ ಎಲ್ಲಿ ನಡೆದಿದ್ದು ಮಾಹಿತಿ ಇಲ್ಲ ಆದರೂ ಈ ವಿಡಿಯೋ ನೋಡಿದ ಹಲವರು ಬಿದ್ದುಬಿದ್ದು ನಕ್ಕಿದ್ದಾರೆ. ಮಾತ್ರವಲ್ಲ ವರನ ಮನಗೆದ್ದ ಈ ವಧು, ತನ್ನ ನಗುವಿನಿಂದಲೇ ಈಗ ಹಲವರ ಮನಗೆದ್ದಿದ್ದಾಳೆ. ಒಂದು ಗಂಭೀರ ಸನ್ನಿವೇಶ ಅತ್ಯಂತ ಹಾಸ್ಯಮಯ ಪ್ರಸಂಗವಾಗಿ ಪರಿಣಮಿಸುವಂತೆ ಮಾಡಿದ ವಧುವಿನ ಬಗ್ಗೆ ಅದೆಷ್ಟೋ ಮಂದಿ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ.
ವಧು-ವರ ಇಬ್ಬರೂ ಕಲ್ಯಾಣ ಮಂಟಪದಲ್ಲಿ ಇರುವಾಗ ಫೋಟೋಗ್ರಾಫರ್ ವಧುವಿನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ. ಒಳ್ಳೇ ಆ್ಯಂಗಲ್ನ ಉತ್ತಮ ಫೋಟೋಗಳಿಗಾಗಿ ಬೇರೆ ಬೇರೆ ಭಂಗಿಗಳಲ್ಲಿ ಕಾಣಿಸುವಂತೆ ಸೂಚನೆ ನೀಡುತ್ತಿದ್ದ ಫೋಟೋಗ್ರಾಫರ್ ಬಗ್ಗೆ ವರ ಅದಾಗಲೇ ಅಸಹನೆಗೊಂಡಿದ್ದ. ಕೆಲವೇ ಕ್ಷಣದಲ್ಲಿ ಫೋಟೋಗ್ರಾಫರ್ ಒಮ್ಮೆ ವಧುವಿನ ಹತ್ತಿರಕ್ಕೆ ತೆರಳಿ ಎನ್ನುತ್ತಿದ್ದಂತೆ ತಾಳ್ಮೆಯನ್ನು ಕಳೆದುಕೊಂಡು ವರ ಕೈ ಎತ್ತಿ ಫೋಟೋಗ್ರಾಫರ್ಗೆ ಬಾರಿಸಿಯೇ ಬಿಟ್ಟಿದ್ದಾನೆ.
ವಧು ಇದರಿಂದ ವಿಚಲಿತಳಾಗುವ ಬದಲಿಗೆ ಬಿದ್ದು ಬಿದ್ದು ನಕ್ಕುಬಿಟ್ಟಳು. ಮಾತ್ರವಲ್ಲ ಪೆಟ್ಟುತಿಂದ ಫೋಟೋಗ್ರಾಫರ್ ಮುಖದಲ್ಲಿ ಕೂಡ ನಗುಮೂಡಿದ್ದು ವಿಡಿಯೋದಲ್ಲಿ ಕಾಣಿಸಿತ್ತು. ಇದು ನೈಜ ಸನ್ನಿವೇಶವೋ ಅಥವಾ ಫೋಟೋಶೂಟ್ಗಾಗಿ ತಮಾಷೆಯಾಗಿ ಚಿತ್ರೀಕರಿಸಿದ ದೃಶ್ಯವೋ ಎಂಬ ಅನುಮಾನ ಮೂಡುವಂತಿದ್ದರೂ, ಈ ವಿಡಿಯೋ ನೋಡಿದ ಬಹುತೇಕ ಎಲ್ಲರೂ ನಗಲಾರಂಭಿಸುವುದಂತೂ ನಿಜ.