LATEST NEWS
ಮೂರು ಪೂರಿಗಳನ್ನು ಒಟ್ಟಿಗೆ ತಿಂದು ಸಾವನಪ್ಪಿದ ಬಾಲಕ
ಹೈದರಾಬಾದ್ ನವೆಂಬರ್ 26: ಬಾಲಕನೊಬ್ಬ ಮೂರು ಪೂರಿಗಳನ್ನು ಒಟ್ಟಿಗೆ ತಿಂದ ಕಾರಣ ಉಸಿರುಗಟ್ಟಿ ಸಾವನಪ್ಪಿದ ಘಟನೆ ಹೈದರಾಬಾದ್ನ ಶಾಲೆಯಲ್ಲಿ ನಡೆದಿದೆ.
ಹೈದರಾಬಾದಿನ ಶಾಲೆಯೊಂದರಲ್ಲಿ ಊಟದ ಸಮಯ, 6ನೇ ತರಗತಿ ವಿದ್ಯಾರ್ಥಿ ಎಲ್ಲರ ಜತೆ ಊಟಕ್ಕೆ ಕೂತಿದ್ದ ಒಂದೇ ಬಾರಿಗೆ ಎಲ್ಲಾ ಪೂರಿಗಳನ್ನು ತಿಂದಿದ್ದ. ಆದರೆ ಏಕಕಾಲಕ್ಕೆ ಹೆಚ್ಚಿನ ಪ್ರಮಾಣದ ಆಹಾರವನ್ನು ಏಕೆ ತಿಂದಿದ್ದಾನೆ ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ ತನ್ನ ಮಗ ಪೂರಿ ತಿನ್ನುವಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಕುರಿತು ಶಾಲೆಯಿಂದ ಕರೆ ಬಂದಿದ್ದಾಗಿ ಹೇಳಿದ್ದಾರೆ.
ಕೂಡಲೇ ಬಾಲಕನನ್ನು ಶಾಲೆಯ ಸಿಬ್ಬಂದಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಖಾಸಗಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಯಿತು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
1 Comment