KARNATAKA
ಅಸ್ಸಾಂ ಹುಡುಗಿ ಕೇರಳ ಹುಡುಗನ ಪ್ರೇಮಕಥೆ ಬೆಂಗಳೂರಿನಲ್ಲಿ ಖತಂ..!!
ಬೆಂಗಳೂರು : ದೂರದ ಅಸ್ಸಾಂ ಹುಡುಗಿ ಮತ್ತು ಪಕ್ಕದ ಕೇರಳ ಹುಡುಗನ ಪ್ರೇಮಕಥೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರಂಭಗೊಂಡು ಅಲ್ಲೇ ಅಂತ್ಯವಾಗಿದೆ. ಅಸ್ಸಾಂ ಹುಡುಗಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಕೇರಳ ಯುವಕ ಪರಾರಿಯಾಗಿದ್ದಾನೆ.
ಉದ್ಯೋಗ ಅರಸಿಕೊಂಡು ಸಿಲಿಕಾನ್ ಸಿಟಿಗೆ ಬಂದಿದ್ದ ಕೇರಳದ ಯುವಕ ಮತ್ತು ಬೆಂಗ್ಳೂರಲ್ಲಿದ್ದು ಖಾಸಾಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಯುವತಿ ನೋಡ್ತಾ ನೋಡ್ತಾ ಪ್ರೀತಿಗೆ ಬಿದ್ದಿದ್ದಾರೆ. ಪ್ರೀತಿ ಮುಂದುವರೆದು ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದು ಒಂದೇ ಫ್ಲ್ಯಾಟಿನಲ್ಲಿ ವಾಸವಿದ್ದು ದಿನ ದೂಡುತ್ತಿದ್ದರು. ಆದ್ರೆ ಬೆಂಗಳೂರಿನ ಇಂದಿರಾನಗರ ರಾಯಲ್ ಲಿವಿಂಗ್ ಅಪಾರ್ಟ್ಮೆಂಟ್ ನಲ್ಲಿದ್ದ ಈ ಕೇರಳದ ಯುವಕ ಅಸ್ಸಾಂ ಮೂಲದ ಯುವತಿಯನ್ನು ಕೊಂದು ಪರಾರಿಯಾಗಿದ್ದಾನೆ. ಆರವ್ ಅನಾಯ್ ಪರಾರಿಯಾದ ಆರೋಪಿಯಾದ್ರೆ ಯುವತಿ ಮಾಯಾ ಹೆಣವಾಗಿದ್ದಾಳೆ. ಕಳೆದ ನಾಲ್ಕೈದು ದಿನಗಳ ಹಿಂದೆ ಇಂದಿರಾನಗರದ ದಿ ರಾಯಲ್ ಲಿವಿಂಗ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು. ಆದರೆ, ಕಳೆದ ಮೂರು ದಿನಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಆಗ ಇಬ್ಬರ ನಡುವೆ ಜಗಳದ ವೇಳೆ ಪ್ರೇಮಿ ಆರವ್ ತನ್ನ ಪ್ರೇಯಸಿ ಮಾಯಾಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾರೆ.
಼ಕೊಲೆ ನಡೆದು ಮೂರು ದಿನಗಳ ನಂತರ ಮನೆಯಿಂದ ದುರ್ವಾಸನೆ ಬರುವುದನ್ನು ಕಂಡು ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು ಆರೋಪಿ ಆರವ್ ಗಾಗಿ ಶೋಧ ಕಾರ್ಯ ಆರಂಭಗೊಂಡಿದೆ.
1 Comment