LATEST NEWS
ಶಬರಿಮಲೆ ಸನ್ನಿಧಾನಕ್ಕೆ ತೆರಳಲು ಯತ್ನಿಸಿದ 11 ಮಹಿಳೆಯರನ್ನು ಪಂಪಾದಲ್ಲೇ ತಡೆದ ಭಕ್ತರು
ಶಬರಿಮಲೆ ಸನ್ನಿಧಾನಕ್ಕೆ ತೆರಳಲು ಯತ್ನಿಸಿದ 11 ಮಹಿಳೆಯರನ್ನು ಪಂಪಾದಲ್ಲೇ ತಡೆದ ಭಕ್ತರು
ತಿರುವನಂತಪುರ ಡಿಸೆಂಬರ್ 23: ತಮಿಳುನಾಡಿನ ಮನಿಥಿ (ತಮಿಳಿನಲ್ಲಿ ಮಹಿಳೆ ಎಂದರ್ಥ) ಎಂಬ ಸಂಘಟನೆ 50 ವರ್ಷ ವಯಸ್ಸಿನೊಳಗಿನ ಮಹಿಳೆಯರ ಅಯ್ಯಪ್ಪ ದೇಗುಲ ಯಾತ್ರೆ ನೇತೃತ್ವ ಹೊತ್ತುಕೊಂಡಿದ್ದು ಇಂದು ಆ ತಂಡ ಸುಮಾರು 11 ಮಂದಿ ಮಹಿಳೆಯರು ಶಬರಿಮಲೆಗೆ ತೆರಳಲು ಪಂಪಾಗೆ ಆಗಮಿಸಿದ್ದಾರೆ.
11 ಮಂದಿ ಮಹಿಳೆಯರನ್ನು ಕೇರಳ ಪೊಲೀಸರು ನಿಲಕ್ಕಲ್ ನಿಂದ ವಾಹನದಲ್ಲಿ ಸೀದಾ ಪಂಪಾಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮಾಡಲು ಪ್ರಯತ್ನಿಸಿದ 11 ಮಹಿಳೆಯರನ್ನು ಸ್ಥಳೀಯರು ತಡೆದಿದ್ದಾರೆ. ಈ ಎಲ್ಲ ಮಹಿಳೆಯರೂ 50 ವರ್ಷದೊಳಗಿನವರಾಗಿದ್ದು ದೇವಸ್ಥಾನ ಪ್ರವೇಶಕ್ಕೆ ಮುಂದಾಗಿದ್ದರು. ಸಿಟ್ಟಿಗೆದ್ದ ಪ್ರತಿಭಟನಾಕಾರರು ಅವರನ್ನೆಲ್ಲ ಅರ್ಧದಲ್ಲೇ ತಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇವರೆಲ್ಲ ಮನಿಟಿ ಸಂಘಟನೆಗೆ ಸೇರಿದ ಮಹಿಳೆಯರಾಗಿದ್ದು ಪೊಲೀಸ್ ಬಿಗಿ ಭದ್ರತೆಯಲ್ಲಿ ಶಬರಿಮಲೆಯನ್ನು ತಲುಪಿದ್ದರು. ಆದರೆ ಪಂಪಾ ಶಿಬಿರದ ಬಳಿಯೇ ಅವರನ್ನು ನೋಡಿದ ಪ್ರತಿಭಟನಾಕಾರರು ಮುಂದೆ ಹೋಗಲು ಬಿಡಲಿಲ್ಲ.
ಇನ್ನೂ ಹೆಚ್ಚಿನ ಜನರು ಸ್ಥಳಕ್ಕೆ ಆಗಮಿಸಬಹುದು ಎಂದು ಆತಂಕಗೊಂಡ ಪೊಲೀಸರು ಮುಂಜಾಗೃತಾ ಕ್ರಮವಾಗಿ ಬಸ್ ಸಂಚಾರ ವ್ಯವಸ್ಥೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳೆಯರು, ತಮಗೆ ರಕ್ಷಣೆ ನೀಡುವುದಾಗಿ ಕೇರಳ ಪೊಲೀಸರು ಭರವಸೆ ನೀಡಿದ್ದರು. ಆದರೆ ಈಗ ನಿರಾಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Facebook Comments
You may like
ಕೇರಳ ಗಡಿ ಬಂದ್ – ಪ್ರಧಾನಿ ಮಧ್ಯಪ್ರವೇಶಕ್ಕೆ ಕೇರಳ ಸಿಎಂ ಒತ್ತಾಯ
ಕೇರಳ ಮತ್ತು ಮುಂಬೈಯಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಕಡ್ಡಾಯ : ಸಂಸದೆ ಶೋಭಾ
‘ಮೆಟ್ರೋ ಮ್ಯಾನ್’ ಶ್ರೀಧರನ್ ಬಳಿಕ ಬಿಜೆಪಿ ಪಡೆ ಸೇರುವರೇ ಪಿ.ಟಿ. ಉಷಾ..?
19 ವರ್ಷದ ಆನೆಯನ್ನು ಮರಕ್ಕೆ ಕಟ್ಟಿಹಾಕಿ ಕೋಲಿನಿಂದ ಭಾರಿಸಿದ ಮಾವುತ…ವಿಡಿಯೋ ವೈರಲ್
ಭಗವತಿ ತೈಯ್ಯಂ ಮಡಿಲಲ್ಲಿ ಬೆಚ್ಚಗೆ ಕುಳಿತ ಮಗು..ಮಗುವಿನ ಮುಗ್ದತೆಗೆ ಮಾರು ಹೋದ ಜನ
ಕೇರಳದಿಂದ ಜಿಲ್ಲೆಗೆ ಆಗಮಿಸುವವರಿಗೆ ಫೆಬ್ರವರಿ 22 ರಿಂದ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ…!!
You must be logged in to post a comment Login