Connect with us

MANGALORE

ಶಿಕ್ಷಣ ಸಂಸ್ಥೆಯ ಬೀಗ ಒಡೆದು 81 ಸಾವಿರ ರೂಪಾಯಿ ನಗದು ಅಪಹರಿಸಿದ ಕಳ್ಳರು

ಶಿಕ್ಷಣ ಸಂಸ್ಥೆಯ ಬೀಗ ಒಡೆದು 81 ಸಾವಿರ ರೂಪಾಯಿ ನಗದು ಅಪಹರಿಸಿದ ಕಳ್ಳರು

ಮಂಗಳೂರು ಡಿಸೆಂಬರ್ 23: ಕೆ.ಸಿ ರೋಡ್ ಫಲಾಹ್ ಶಿಕ್ಷಣ ಸಂಸ್ಥೆಯ ತರಗತಿ ಬೀಗ ಒಡೆದ ಕಳ್ಳರು. 81,000 ನಗದು ದೋಚಿ ಪರಾರಿಯಾಗಿದ್ದಾರೆ.

ಶಾಲೆಯ ಮಕ್ಕಳ ಪ್ರವಾಸಕ್ಕಾಗಿ ಕ್ರೋಡೀಕರಿಸಲಾಗಿದ್ದ 75 ಸಾವಿರ ರೂಪಾಯಿ ಸೇರಿದಂತೆ ಮುಖ್ಯೋಧ್ಯಾಯಿನಿ ಸಬೀನಾ ಕೈಸರ್ ಅವರ ವೈಯಕ್ತಿಕ 6,000 ನಗದನ್ನು ಕಳ್ಳರು ದೋಚಿದ್ದಾರೆ.

ಶಾಲೆಯಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಂಜಾ ಮಾಫಿಯಾದ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಧ್ವನಿಯೆತ್ತಿದ್ದರೆನ್ನಲಾಗಿದೆ. ಶಾಲಾಡಳಿತದ ವಿರುದ್ಧ ಪ್ರತೀಕಾರಕ್ಕಾಗಿ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಕಳ್ಳತನ ನಡೆದಿರುವ ಶಾಲಾ ಸಂಸ್ಥೆಗೆ ಭೇಟಿ ನೀಡಿ ತನಿಖೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.