Connect with us

    DAKSHINA KANNADA

    ಒಂದೇ ವರ್ಷದಲ್ಲಿ 16 ಬಾರಿ ನೋ ಪಾರ್ಕಿಂಗ್ ಕೇಸ್ , ಮೆಡಿಕಲ್ ಶಾಪ್ ನಲ್ಲಿ ನೋಟಿಸ್ ಪ್ರದರ್ಶನ

    ಉಳ್ಳಾಲ, ಜನವರಿ 23: ನಗರದ ಮುಡಿಪು ಆಯುರ್ವೇದ ಮೆಡಿಕಲ್ ಸ್ಟೋರ್ ಮಾಲಕಿಯೊಬ್ಬರ ಮೇಲೆ ಟ್ರಾಫಿಕ್ ಪೊಲೀಸರು ಒಂದು ವರ್ಷದಲ್ಲಿ 16 ಬಾರಿ ನಿಯಮ ಉಲ್ಲಂಘನೆಯ ಕೇಸು ಹಾಕಿದ್ದಾರೆ. ಇದರಿಂದ ಅಸಮಾಧಾನಗೊಂಡ ಆಕೆ ಪೊಲೀಸರು ಜಾರಿ ಮಾಡಿದ ನೋಟಿಸ್‌ಗಳನ್ನು ತಮ್ಮ ಮೆಡಿಕಲ್ ಸ್ಟೋರ್‌ನಲ್ಲಿ ಸಾರ್ವಜನಿಕರ ಮುಂದೆ ಪ್ರದರ್ಶನಕ್ಕಿಟ್ಟಿದ್ದಾರೆ.

    ಮುಡಿಪು ಜಂಕ್ಷನ್ ಬಳಿ ಖಾಸಗಿ ಕಟ್ಟಡದಲ್ಲಿರುವ ಆಯುರ್ವೇದಿಕ್ ಮೆಡಿಕಲ್ ಶಾಪ್ ಮಾಲಕಿ ಶ್ರೀಮತಿ ಎಂಬುವರ ಮೇಲೆ ನೋಪಾರ್ಕಿಂಗ್ ಹೆಸರಲ್ಲಿ 16 ಕೇಸುಗಳನ್ನು ಟ್ರಾಫಿಕ್ ಪೊಲೀಸರು ದಾಖಲಿಸಿದ್ದರು. ಮೆಡಿಕಲ್ ಶಾಪ್ ಬಳಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಮಾಲಕಿ ಪ್ರತಿನಿತ್ಯ ಅಂಗಡಿ ಮುಂದೆ ಸ್ಕೂಟರ್ ಒಂದು ಕ್ಷಣ ನಿಲ್ಲಿಸಿ ಬಳಿಕ ಪಕ್ಕದಲ್ಲೇ ಇರುವ ಸಹೋದರಿಯ ಅಪಾರ್ಟ್‌ಮೆಂಟ್ ಬಳಿ ಪಾರ್ಕ್ ಮಾಡುತ್ತಿದ್ದರು. ಆದರೆ ಪೊಲೀಸರು ಒಂದು ಕ್ಷಣ ನೋ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ನಿಲ್ಲಿಸಿದ್ದಕ್ಕೆ ಕೇಸು ಹಾಕುತ್ತಲೇ ಇದ್ದಾರೆ.

    ವರ್ಷದಲ್ಲಿ 16 ಕೇಸ್ ದಾಖಲಾಗಿದ್ದು, ದಂಡದ ಮೊತ್ತವೂ 11,500 ರೂ.ದಾಟಿದೆ. ಇದರಿಂದ ಅಸಮಾಧಾನಗೊಂಡ ಮಹಿಳೆ, ಪೊಲೀಸರು ನೀಡಿರುವ ನೋಟಿಸ್‌ಗಳನ್ನು ಮೆಡಿಕಲ್ ಶಾಪ್ ಮುಂದೆ ಪ್ರದರ್ಶನಕ್ಕಿಟ್ಟಿದ್ದಾರೆ.

    ಈ ಬಗ್ಗೆ ಮಾತನಾಡಿದ ಶ್ರೀಮತಿ, ಕಳೆದ ವರ್ಷ ಮೊದಲ ಬಾರಿಗೆ ಟ್ರಾಫಿಕ್ ಪೊಲೀಸರು ತಡೆದು ನೋ ಪಾರ್ಕಿಂಗ್ ಕಾರಣಕ್ಕೆ ಐದು ಸಾವಿರ ರೂ.ದಂಡ ಪಾವತಿ ಬಾಕಿ ಇರುವುದನ್ನು ಗಮನಕ್ಕೆ ತಂದಿದ್ದರು. ಆದರೆ ನೋಟಿಸ್ ಬಂದಿಲ್ಲ ಎಂದು ತಿಳಿಸಿದ್ದೆ. ಬಳಿಕ ಪೋಸ್ಟ್‌ನಲ್ಲಿ ಸರಾಗ ನೋಟಿಸ್ ಬರುತ್ತಿದೆ. ಸದ್ಯದಲ್ಲೇ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಿಲು ಚಿಂತನೆ ನಡೆಸಿದ್ದೇನೆ ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply