TECHNOLOGY
ಮಾತನಾಡಿದನ್ನೇ ಟೈಪ್ ಮಾಡುವ ಹೊಸ ತಂತ್ರಾಂಶ ‘ಲಿಪಿಕಾರ್ ‘
ಸ್ಮಾರ್ಟ್ ಫೋನ್ ಬಳಸುವವರಲ್ಲಿ ಕನ್ನಡ ಬಳಸುವ ವಿಷಯಕ್ಕೆ ಬಂದಾಗ ಕನ್ನಡವನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆಯುವವರ ಸಂಖ್ಯೆ ಗಣನೀಯವಾಗಿದೆ. ಈ ರೀತಿ ಬರೆಯುವುದಕ್ಕೆ ನಾನು ಕಂಗ್ಲಿಷ್ ಎನ್ನುತ್ತೇನೆ.
ಕನ್ನಡದ ಕೀಬೋರ್ಡ್ ಗಳು ಬೇಕಾದಷ್ಟಿದ್ದರೂ ಅವನ್ನು ಕಲಿಯಲು ಕೆಲವರಿಗೆ ಸೋಮಾರಿತನ. ಅಂತಹವರಿಗಾಗಿಯೇ ಈಗ ಕನ್ನಡದ ಧ್ವನಿಯಿಂದ ಪಠ್ಯಕ್ಕೆ ಬದಲಾವಣೆ ಮಾಡುವ ಕೀಲಿಮಣೆ ತಂತ್ರಾಂಶ ಬಂದಿದೆ. ಇದು ಬೇಕಿದ್ದಲ್ಲಿ ನೀವು ಗೂಗಲ್ ಪ್ಲೇಸ್ಟೋರಿನಲ್ಲಿ Lipikaar Kannada Keyboard ಎಂದು ಹುಡುಕಬೇಕು ಅಥವಾ bit.ly/gadgetloka289 ಜಾಲತಾಣಕ್ಕೆ ಭೇಟಿ ನೀಡಿ. ಈ ಕೀಲಿಮಣೆಯನ್ನು ಹಾಕಿಕೊಂಡ ನಂತರ ಅದನ್ನು ಆಯ್ಕೆ ಮಾಡಿಕೊಳ್ಳಬೇಕು, ಅದರಲ್ಲಿ ಕನ್ನಡ ಎಂದು ಆಯ್ಕೆಮಾಡಿಕೊಂಡು ಅಲ್ಲಿ ಕಾಣಿಸುವ ಮೈಕ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಕನ್ನಡದಲ್ಲಿ ಮಾತನಾಡಬೇಕು. ಆಗ ಅದು ಮಾತನಾಡಿದ್ದನ್ನು ಕನ್ನಡ ಪಠ್ಯಕ್ಕೆ ಬದಲಾವಣೆ ಮಾಡುತ್ತದೆ. ಇದು ಕೆಲಸ ಮಾಡಲು ಉತ್ತಮ ಅಂತರಜಾಲ ಸಂಪರ್ಕ ಅಗತ್ಯ.
You must be logged in to post a comment Login