Connect with us

  MANGALORE

  ಬಂದರು ಶ್ರಮಿಕರ ಸಂಘ ದಿಂದ ಸಹಾಯ

  ಬಂದರು ಶ್ರಮಿಕರ ಸಂಘ ದಿಂದ ಸಹಾಯ

  ಮಂಗಳೂರು ಸೆಪ್ಟೆಂಬರ್ 23: ಮಂಗಳೂರು ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಉಮರ್ ಫಾರೂಕ್ ಮುಕ್ಕಚ್ಚೇರಿ ಅವರು ವಾರದ ಹಿಂದೆ ಹೃದಯಾಪಘಾತದಿಂದ ನಿಧನರಾಗಿದ್ದರು. ಅವರು ಪತ್ನಿ ಮತ್ತು ನಾಲ್ಕು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಉಳ್ಳಾಲ ಮುಕ್ಕಚ್ಚೇರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

  ಫಾರೂಕ್ ನಿಧನದಿಂದ ಅವರ ಕುಟುಂಬ ಸಂಕಷ್ಟದಲ್ಲಿರುವುದನ್ನು ಗಮನಿಸಿ ಬಂದರು ಶ್ರಮಿಕರ ಸಂಘದ ವತಿಯಿಂದ 20,000 ಧನ ಸಹಾಯವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಅವರು ಫಾರೂಕ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಿವೈಎಫ್ ಐ ಉಳ್ಳಾಲ ವಲಯ ಆಧ್ಯಕ್ಷರಾದ ಜೀವನ್ ರಾಜ್ ಕುತ್ತಾರ್, ಬಂದರು ಶ್ರಮಿಕ ಸಂಘದ ಮುಖಂಡರಾದ ಹರೀಶ್ ಕೆರೆಬೈಲು,ಹಸನ್ ಮೋನು ಬೆಂಗರೆ, ಫಾರುಕ್ ಉಳ್ಳಾಲ, ಲತೀಫ್ ಉಪಸ್ಥಿತರಿದ್ದರು.

   

  Share Information
  Advertisement
  Click to comment

  You must be logged in to post a comment Login

  Leave a Reply