UDUPI
ದೇಶದ ಅಭಿವೃದಿಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ- ಪ್ರಮೋದ್
ದೇಶದ ಅಭಿವೃದಿಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ- ಪ್ರಮೋದ್
ಉಡುಪಿ, ಸೆಪ್ಟೆಂಬರ್ 17 : ದೇಶದ ಪ್ರಗತಿ ಹೊಂದಲು ವಿಶ್ವಕರ್ಮ ಸಮುದಾಯ ನೀಡಿರುವ ಕೊಡುಗೆ ಅನನ್ಯವಾದುದು , ಈ ಸಮುದಾಯದಿಂದ ದೇಶ ಕಟ್ಟುವ ಕೆಲಸ ನೆಡೆಯುತ್ತಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.ಅವರು ಭಾನುವಾರ , ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಕರ್ಮ ಸಮುದಾಯದವರು ದೇಶದ ಪ್ರತಿಯೊಂದು ರಾಜ್ಯ, ಜಿಲ್ಲೆಗಳಲ್ಲಿ ಇದ್ದಾರೆ. ದೇಶ ಕಟ್ಟುವಲ್ಲಿ ಈ ಸಮಾಜ ಶ್ರಮಿಸುತ್ತಿದೆ, ಆದ್ದರಿಂದಲೇ ಇಂದು ದೇಶ ಅಭಿವೃದ್ದಿಯಲ್ಲಿ ವಿಶ್ವದ 3 ನೇ ಸ್ಥಾನದಲ್ಲಿದೆ, ದೈವದತ್ತವಾಗಿ ಬಂದಿರುವ ಕೌಶಲ್ಯದಿಂದಾಗಿ ಯಾವುದೇ ಸಣ್ಣ ವಸ್ತುಗಳಿಗೂ ವಿಶಿಷ್ಟ ರೂಪ ನೀಡುವ ಸಾಮರ್ಥ್ಯ ಈ ಸಮಾಜಕ್ಕೆ ಇದೆ ಎಂದು ಸಚಿವರು ಹೇಳಿದರು.
ಮರಳುಗಾರಿಕೆಗೆ ಅನುಮತಿ.
ವಿಶ್ವಕರ್ಮ ಸಮುದಾಯದವರು ಕಟ್ಟಡ ನಿರ್ಮಾಣ ಕಾರ್ಯದಲ್ಲೂ ತೊಡಗಿಕೊಂಡಿದ್ದು, ಇತ್ತೀಚೆಗೆ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧದಿಂದಾಗಿ ಕಟ್ಟಡ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗದ ಪರಿಸ್ಥಿತಿ ಇತ್ತು, ಆದರೆ ಚೆನೈ ನ ಹಸಿರು ನ್ಯಾಯಪೀಠ ಜಿಲ್ಲೆಯಲ್ಲಿ ಷರುತ್ತುಗಳಿಗೆ ಒಳಪಟ್ಟು ಕಾನೂನುಬದ್ದವಾಗಿ ಮರಳು ತೆಗೆಯಲು ಅನುಮತಿ ನೀಡಿರುವುದರಿಂದ , ಪ್ರಸ್ತುತ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ತೆಗೆಯುವ ಮರಳು ಜಿಲ್ಲೆಯ ಉಪಯೋಗಕ್ಕೆ ಮಾತ್ರ ಬಳಕೆ ಮಾಡಲು ತಾವು ಸೂಚಿಸಿದ ಪರಿಣಾಮ , ಜಿಲ್ಲೆಯಲ್ಲಿ 15000 ರೂ ಇದ್ದ ಒಂದು ಲೋಡ್ ಮರಳು ಈಗ 3000 ರೂ ಗೆ ದೊರೆಯುತ್ತಿದೆ ಎಂದರು.
ಉಡುಪಿಯ ವಡೇರಹೋಬಳಿ ಮತ್ತು ಕುಕ್ಕಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನಗಳಿಗೆ ಅಗತ್ಯ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ವಿಶ್ವಕರ್ಮ ಸಮುದಾಯದಿಂದ ಸಮಾಜದಲ್ಲಿ ಪ್ರಗತಿ ಸಾಧ್ಯ, ಸಮುದಾಯದ ಯುವ ಜನತೆ ತಮ್ಮ ಪಾರಂಪರಿಕ ಉದ್ಯೋಗದಲ್ಲಿ ತೊಡಗಿಕೊಳ್ಳುವುದರ ಮೂಲಕ 21 ನೆ ಶತಮಾನದಲ್ಲಿ ಭಾರತ ಜಗದ್ಗುರು ಮಾಡಲು ಸಾಧ್ಯ, ಕೇಂದ್ರ ಸರ್ಕಾರ ರೂಪಿಸಿರುವ ವಿವಿಧ ಕೌಶಲ ಯೋಜನೆಗಳ ಪ್ರಯೋಜನವನ್ನು ಸಮುದಾಯದ ಯುವಜನತೆ ಪಡೆಯುವಂತೆ ತಿಳಿಸಿದರು.
ವಿಶ್ವಕರ್ಮ ಸಮುದಾಯದಲ್ಲಿ ಸಾಧನೆ ಮಾಡಿದ 5 ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು.
You must be logged in to post a comment Login