Connect with us

  DAKSHINA KANNADA

  ಕರಾವಳಿ ಜಿಲ್ಲೆಗಳಿಗೆ ಪ್ರಚಾರಕ್ಕೆ ಬಾರದ ಕಾಂಗ್ರೆಸ್ ರಾಜ್ಯ,ರಾಷ್ಟ್ರ ನಾಯಕರು, ಕ್ರಾಂಗ್ರೆಸ್ ಅಭಿಮಾನಿಗಳಲ್ಲಿ ತೀವ್ರ ಬೇಸರ..!!

  ಉಡುಪಿ: ಭಾರಿ ನಿರೀಕ್ಷೆಯ  ಲೋಕಸಭಾ ಚುನಾವಣೆಯ ಸಮರಕ್ಕೆ ಇನ್ನು ಮೂರೇ ದಿನಗಳು ಬಾಕಿ ಇವೆ. ರಾಜ್ಯ, ದೇಶಾದ್ಯಾದ್ಯಂತ  ಬಿರುಸಿನ ಪ್ರಚಾರ ನಡೆಯುತ್ತಿದೆ ಆದರೆ  ದಕ್ಷಿಣ ಕನ್ನಡ ,ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಯಾವುದೇ ರಾಷ್ಟ್ರ, ರಾಜ್ಯ ಮಟ್ಟದ ನಾಯಕರಾಗಲಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರಚಾರ ಸಭೆಯಾಗಲಿ ಚುನಾವಣೆ ಘೋಷಣೆಯಾದ ಬಳಿಕ ನಡೆಸದೆ ಇರುವುದರಿಂದ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

  ಚುನಾವಣೆ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಯಾಗಿ ಅಭ್ಯಾರ್ಥಿಗಳಾದ  ಜಯಪ್ರಕಾಶ್ ಹೆಗ್ಡೆ ಹಾಗೂ ಪದ್ಮರಾಜ್  ಅವರುಗಳು ಹಾಗೂ ಕಾರ್ಯಕರ್ತರು ಭರ್ಜರಿಯಾಗಿ ಮತ ಪ್ರಚಾರ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವರಿ ಸಚಿವ ದಿನೆಶ್ ಗುಂಡೂರಾವ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಅವರು ಕ್ಷೇತ್ರಗಳತ್ತ  ತಲೆಯೇ ಹಾಕದೆ ಇರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. 2012ರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಪಕ್ಷದ ಸಂಘಟಿತ ಹೋರಾಟವೇ ಆಗಿತ್ತು. ಆದರೇ ಈ ಬಾರಿಯ ಚುನಾವಣೆಯಲ್ಲಿ ಯಾಕೋ ದೊಡ್ಡ ನಾಯಕರುಗಳು  ನಿರಾಸಕ್ತಿ ಹೊಂದಿದ್ದಾರೆ. ಕರಾವಳಿಗೆ ಇಳಿದ ಒಂದಿಬ್ಬರು ನಾಯಕರು ಕ್ಷೇತ್ರ ಪ್ರಚಾರಕ್ಕೆ ತೆರಳದೆ ಕೇವಲ ಸುದ್ದಿಗೋಷ್ಟಿ ನಡೆಸಿ ಹೋಗಿರುವುದು ಕೂಡ ಕಾರ್ಯಕರ್ತರಿಗೆ ಬೇಸರ ತರಿಸಿದೆ. ಈ ಬಾರಿ 2 ಕ್ಷೇತ್ರಗಳಲ್ಲೂ ಈ ಹಿಂದೆದೂ ಇರದ ಹಣಹಣಿಯ ನೇರಾ ಫೈಟ್ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಇದ್ದರೂ ನಿಲ್ಲಕ್ಷ ವಹಿಸುತ್ತಿರುವ  ಹಿರಿಯ ಮುಖಂಡರುಗಳ ಬಗ್ಗೆ ಕಾರ್ಯಕರ್ತರು ಬೇಸರ ವ್ತಕ್ತಪಡಿಸಿದ್ದಾರೆ. ಒಂದೆಡೆ ಈ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದ ಆಕಾಂಕ್ಷಿಗಳೂ ಕೂಡ ಯಾವುದೇ ದೊಡ್ಡ ಮಟ್ಟದ ಪ್ರಚಾರ ಸಭೆಯಲ್ಲಿ ತೊಡಗಿಸಿಕೊಳ್ಳದೆ, ಸಮಾವೇಶಗಳನ್ನು ಸಂಘಟಿಸುವ ಬಗ್ಗೆಯೂ ಯಾವುದೇ ಕಾರ್ಯಯೋಜನೆ ಹಾಕಿಕೊಳ್ಳದೆ ತಟಸ್ಥವಾಗಿರುವುದು ಕೂಡ ಜಯಪ್ರಕಾಶ್ ಹೆಗ್ಡೆ ಅವರ ಹಿನ್ನಡೆಗೆ ಕಾರಣವಾಗಬಹುದು ಎಂಬ ಆತಂಕ ಕಾರ್ಯಕರ್ತರಿಂದ ವ್ಯಕ್ಯವಾಗಿದೆ. ಕಾಂಗ್ರೆಸ್‌ನ ಜನಪರ ಯಶಸ್ವಿ ಕಾರ್ಯಕ್ರಮ ಗ್ಯಾರಂಟಿ ಭಾಗ್ಯಗಳು ಜನತೆಗೆ ಮುಟ್ಟಿದ್ದರೂ, ಅದನ್ನು ಮನೆಮನೆಗೆ ತೆರಳಿ ನೆನಪಿಸುವ ಕಾರ್ಯ ರಾಜ್ಯದ ಇತರ ಭಾಗಗಳಲ್ಲಿ ನಡೆದಂತೆ  ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಎರಡು ಜಿಲ್ಲೆಯಲ್ಲಿ ರಾತ್ರಿ ಹಗಲು ಓಡಾಟ ನಡೆಸಿ ಪಕ್ಷೇತರ ಅಭ್ಯರ್ಥಿಯಂತೆ ಮತಯಾಚಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ಗಂಭೀರ ಆರೋಪ‌ ಮಾಡಿದ್ದರೂ ಜಿಲ್ಲಾ ಕಾಂಗ್ರೆಸ್ ನಾಯಕರು ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ಇದ್ದಾರೆ.ಇಲ್ಲಿನ ನಾಯಕರಿಗೆ ತಮ್ಮ ಅಭ್ಯರ್ಥಿ ಗೆದ್ದರೆ ತಾವೆಲ್ಲಿ ಮೂಲೆ ಗುಂಪು ಆಗುತ್ತೇವೆ ಎನ್ನುವ ಭಯ ಕಾಡುತ್ತಿದೆ ಯೆಂದು ಕಾಂಗ್ರೆಸ್ ಅಭಿಮಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.ಇದೆಲ್ಲವನ್ನೂ ಸರಿದೂಗಿಸಬೇಕಾದರೆ ರಾಷ್ಟ್ರ ಮಟ್ಟದ ನಾಯಕರು, ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಅವರು ತಕ್ಷಣವೇ ಕರಾವಳಿ ಜಿಲ್ಲೆಗಗಳಿಗೆ ಆಗಮಿಸಿ ಪ್ರಚಾರದಲ್ಲಿ ಪಾಲ್ಗೊಂಡು ಇಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಬೇಕಾದ ಅನಿವಾರ್ಯತೆ ಇದೆ.

  Share Information
  Advertisement
  Click to comment

  You must be logged in to post a comment Login

  Leave a Reply