Connect with us

UDUPI

ವಿಧಾನಸಭೆಗೆ ಕ್ಷೇತ್ರ ಆಯ್ಕೆಯ ಧ್ವಂದ್ವದಲ್ಲಿ ಬಿ.ಎಸ್ ಯಡಿಯೂರಪ್ಪ – ಶೋಭಾ ಕರಂದ್ಲಾಜೆ

ವಿಧಾನಸಭೆಗೆ ಕ್ಷೇತ್ರ ಆಯ್ಕೆಯಲ್ಲಿ ಧ್ವಂದ್ವದಲ್ಲಿ ಬಿ.ಎಸ್ ಯಡಿಯೂರಪ್ಪ – ಶೋಭಾ ಕರಂದ್ಲಾಜೆ

ಉಡುಪಿ ಸೆಪ್ಟೆಂಬರ್ 18: ಬಿ.ಎಸ್ ಯಡಿಯೂರಪ್ಪ ರಾಜ್ಯ ವಿಧಾನ ಸಭೆಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸಬೇಕೆಂಬ ವಿಚಾರದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಯಡಿಯೂರಪ್ಪನವರಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬೇಡಿಕೆ ಬರುತ್ತಿದ್ದು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಯಡಿಯೂರಪ್ಪನವರ ಸ್ವಂತ ಜಿಲ್ಲೆ ಶಿವಮೊಗ್ಗ ಮತ್ತು ಪ್ರೀತಿಯ ಸ್ವಕ್ಷೇತ್ರ ಬಿಡಲು ಅವರಿಗೆ ಮನಸ್ಸಿಲ್ಲ, ಸ್ಪರ್ಧೆಯ ಬಗ್ಗೆ ಯಡಿಯೂರಪ್ಪ ಬಹಳ ದ್ವಂದ್ವದಲ್ಲಿದ್ದಾರೆ ಎಂದು ಅವರು ಹೇಳಿದರು. ಯಡಿಯೂರಪ್ಪ ಎಲ್ಲೇ ನಿಂತರೂ ಬಹುಮತದಿಂದ ಗೆಲ್ಲುತ್ತಾರೆ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಈ ಸಲ ವಿಧಾನಸಭೆಗೆ ತಮ್ಮ ಕ್ಷೇತ್ರ ಬದಲು ಮಾಡಲೇಬೇಕು ವರುಣಾ ಕ್ಷೇತ್ರ ಸಿದ್ದರಾಮಯ್ಯನವರ ಕೈ ತಪ್ಪಿಯಾಗಿದೆ. ಸಿಎಂ ಎಲ್ಲೇ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದು ಅವರು ಹೇಳಿದರು. ಈಗ ಸಿಎಂ ಸಿದ್ದರಾಮಯ್ಯ ಅವರು ಸೋಲಿನ ಭಯದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಓಡಾಟ ಮಾಡ್ತಿದ್ದಾರೆ ಎಲ್ಲಿ ಹೋದರೂ ಸಿದ್ದರಾಮಯ್ಯನವರಿಗೆ ಸೋಲು ಗ್ಯಾರೆಂಟಿ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಗಣಪತಿ ಸಾವಿನ ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜೀನಾಮೆ ವಿಚಾರದ ವಿರುದ್ದ ಪ್ರತಿಭಟನೆ ನಡೆಸಿದರು, ರಾಜ್ಯ ಸರ್ಕಾರ ದಪ್ಪ ಚರ್ಮದ ಸರ್ಕಾರವಾಗಿದ್ದು ನಮ್ಮ ಕೂಗು ಯಾರಿಗೂ ಕೇಳಿಸುತ್ತಿಲ್ಲ ಎಂದು ಹೇಳಿದ ಅವರು ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ, ಆದರೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಸಿಐಡಿ ಅಧಿಕಾರಿಗಳ ಮೂಲಕ ಷಡ್ಯಂತ್ರ ಮಾಡಿದ್ದು ಸಿಐಡಿ ಅಧಿಕಾರಿಗಳು ಸಾಕ್ಷಿಗಳನ್ನು ಮುಚ್ಚಿ ಹಾಕಲಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು. ಸಿಐಡಿ ಅಧಿಕಾರಿಗಳು ಗಣಪತಿ ಸಂಬಂಧಿಕರಿಗೆ- ಬಂಧುಗಳಿಗೆ ಧಮ್ಕಿ ಹಾಕುತಿದ್ದು  ಈ ಎಲ್ಲದರೂ ಹಿಂದೆ ಸಿಎಂ – ಜಾರ್ಜ್ ಇದ್ದಾರೆ ಅನ್ನೋದು ಸ್ಪಷ್ಟ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

Facebook Comments

comments