Connect with us

LATEST NEWS

ರಾಸಲೀಲೆ ಹಗರಣದಿಂದ ಮುಕ್ತಿ ಕಾಣಲು ದೈವದ ಮೊರೆ ಹೋದ ಮೇಟಿ

ರಾಸಲೀಲೆ ಹಗರಣದಿಂದ ಮುಕ್ತಿ ಕಾಣಲು ದೈವದ ಮೊರೆ ಹೋದ ಮೇಟಿ

ಉಡುಪಿ, ಸೆಪ್ಟೆಂಬರ್ 18 : ರಾಸಲೀಲೆ ಅಶ್ಲೀಲ ವಿಡಿಯೋ ಪ್ರಕರಣದಿಂದ ಭಾರಿ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಅಬಕಾರಿ ಸಚಿವ ಹೆಚ್. ವೈ. ಮೇಟಿ ತಮ್ಮ ತಪ್ಪುಗಳಿಗೆ ಹಾಗೂ ತಾವು ಎದುರಿಸುತ್ತಿರುವ ಸಂಕಷ್ಟಗಳ ಪರಿಹಾರಕ್ಕೆ ಇದೀಗ ದೈವಗಳ ಮೊರೆಹೋಗಿದ್ದಾರೆ.

ಅಬಕಾರಿ ಸಚಿವರಾಗಿದ್ದ ಹೆಚ್. ವೈ. ಮೇಟಿ ಮಹಿಳೆಯೊಬ್ಬರೊಂದಿಗೆ ಸರ್ಕಾರಿ ಕಛೇರಿಯಲ್ಲೇ ನಡೆಸಿದ್ದಾರೆನ್ನಲಾದ ಈ ರಾಸಲೀಲೆಯ ಅಶ್ಲೀಲ ವಿಡಿಯೋ ಸಿಡಿ ಬಹಿರಂಗಗೊಂಡ ಬಳಿಕ ತಮ್ಮ ಸಚಿವ ಸ್ಥಾನ ಕಳೆದುಕೊಂಡು ಭಾರೀ ಮುಜುಗರಕ್ಕೆ ಗುರಿಯಾಗಿದ್ದರು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಈ ಎಲ್ಲಾ ಅಪವಾದಗಳಿಗೆ ಪರಿಹಾರ ಕಾಣಲು ಮಾಜಿ ಸಚಿವ ವೈ ಮೇಟಿ  ಉಡುಪಿಯ ಬಾರ್ಕೂರು ಮಹಾಸಂಸ್ಥಾನಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದಾರೆ. ಇಲ್ಲಿರುವ ಪಾಂಡ್ಯ ಅರಸರ ಕಾಲದ ನ್ಯಾಯ ಗಂಟೆ ಬಾರಿಸುವ ಮೂಲಕ ದೈವದ ಮೊರೆ ಹೋಗಿದ್ದಾರೆ.

ಪಾಂಡ್ಯ ಅರಸರ ಕಾಲದಲ್ಲಿ ಯಾರೇ ತಪ್ಪು ಮಾಡಿದರೂ ಅಥವಾ ಸಂಕಷ್ಟ ದಲ್ಲಿದ್ದರೆ ದೈವದ ಎದುರು ಬಂದು ದೂರು ಗಂಟೆ ಬಾರಿಸುವ ಕ್ರಮವಿತ್ತು. ಆದರೆ ಅರಸೊತ್ತಿಗೆ ಅಳಿದ ಬಳಿಕ ಜನ ಕುಂಡೋದರ ದೈವದೆದುರು ಬಂದು ಜನ ತಮ್ಮ ಸಂಕಷ್ಟ ಗಳ ನಿವಾರಣೆಗೆ ಗಂಟೆ ಬಾರಿಸುತ್ತಾರೆ.ಈ ಕ್ರಮ ಇಂದಿಗೂ ಮುಂದುವರೆದಿದೆ.

ಸದ್ಯ ಮಹಿಳೆಯೊಬ್ಬರೊಂದಿಗೆ ಸರ್ಕಾರಿ ಕಛೇರಿಯಲ್ಲೇ ನಡೆಸಿದ್ದಾರೆನ್ನಲಾದ ಈ ರಾಸಲೀಲೆಯ ಅಪವಾದಗಳಿಂದ ನೊಂದಿರುವ ಮಾಜಿ ಸಚಿವ ಮೇಟಿ ನ್ಯಾಯಕ್ಕಾಗಿ ಕುಂಡೋದರ ದೈವದ ಮೊರೆ ಹೋಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Facebook Comments

comments