Connect with us

UDUPI

ಖಮರುಲ್ ಇಸ್ಲಾಂ ನಿಧನಕ್ಕೆ ಪ್ರಮೋದ್ ಮಧ್ವರಾಜ್ ಸಂತಾಪ

ಖಮರುಲ್ ಇಸ್ಲಾಂ ನಿಧನಕ್ಕೆ ಪ್ರಮೋದ್ ಮಧ್ವರಾಜ್ ಸಂತಾಪ

ಉಡುಪಿ ಸೆಪ್ಟೆಂಬರ್ 18: ಮಾಜಿ ಸಚಿವ ಹಾಗೂ ಶಾಸಕ ಖಮರುಲ್ ಇಸ್ಲಾಂ ನಿಧನ ಹಿನ್ನೆಲೆ ಉಡುಪಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ ಸೂಚಿಸಿದ್ದಾರೆ. ರಾಜ್ಯ ರಾಜಕೀಯ ಮುತ್ಸದ್ಧಿಯನ್ನು ಕಳೆದುಕೊಂಡಿದೆ. ಅವರೊಬ್ಬ ಅನುಭವಿ ರಾಜಕಾರಣಿಯಾಗಿದ್ದು, ಗುಲ್ಬರ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದವರು ಎಂದು ಹೇಳಿದರು.

ಮಾಜಿ ಸಚಿವ ಹಾಗೂ ಶಾಸಕ ಖಮರುಲ್ ಇಸ್ಲಾಂ ಅವರ ಆಕಸ್ಮಿಕ ಸಾವು ನಮಗೆಲ್ಲ ನೋವು ತಂದಿದೆ ಎಂದು ತಿಳಿಸಿದರು. ಖಮರುಲ್ ಇಸ್ಲಾಂ ಅವರ ಸಾವು ಅಲ್ಪ ಸಂಖ್ಯಾತರಿಗೆ ಬಹಳ ನೋವಾಗುವ ಸಂದರ್ಭವಾಗಿದ್ದು, ನಿಧನದ ದುಃಖ ಸಹಿಸುವ ಶಕ್ತಿ ಭಗವಂತ ಎಲ್ಲರಿಗೂ ಕೊಡಲಿ ಉಡುಪಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ ಸೂಚಿಸಿದ್ದಾರೆ.

Facebook Comments

comments