Connect with us

UDUPI

ಅತ್ತೆಗೆ ಚಿತ್ರ ಹಿಂಸೆ ನೀಡಿ ಪರಾರಿಯಾದ ಸೊಸೆ ಪ್ರತ್ಯಕ್ಷ – ಕಥೆಗೆ ಟ್ವಿಸ್ಟ್

ಅತ್ತೆಗೆ ಚಿತ್ರ ಹಿಂಸೆ ನೀಡಿ ಪರಾರಿಯಾದ ಸೊಸೆ ಪ್ರತ್ಯಕ್ಷ – ಕಥೆಗೆ ಟ್ವಿಸ್ಟ್

ಉಡುಪಿ ಸೆಪ್ಟೆಂಬರ್ 18: ಅತ್ತೆಯಿಂದ ಸೊಸೆಗೆ ಕಿರುಕುಳು ಪ್ರಕರಣ ಕೇಳಿದ್ದೀರಾ ಆದರೆ ಇಲ್ಲಿ,  ಅತ್ತೆ ತನ್ನ ಸೊಸೆಯಿಂದಲೇ ಚಿತ್ರ ಹಿಂಸೆಗೊಳಗಾದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ

ಸಂತೆಕಟ್ಟೆ ಕಲ್ಯಾಣಪುರ ಲಕ್ಷ್ಮೀಂದ್ರ ನಗರದ ವೃದ್ದ ಮಹಿಳೆ ವೀಣಾ ಪೈ (68) ಸೊಸೆಯ ಕ್ರೂರ ಹಿಂಸೆಯಿಂದ ನರಕಯಾತನೆ ಅನುಭವಿಸಿದವರು. ವೆಂಕಟೇಶ್ ಪೈ ಹಾಗೂ ವೀಣಾ ಪೈ ದಂಪತಿಗೆ ಮೂವರು ಮಕ್ಕಳಿದ್ದು, ಕೆಲ ವಾರ ಹಿಂದೆ ಹಿರಿಯ ಮಗ ಲಕ್ಷ್ಮಣ ಪೈ ತಂದೆ ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದರು. ಇದಕ್ಕೆ ತಗಾದೆ ತೆಗೆದಿದ್ದ ಸೊಸೆ ಅಶ್ವಿನಿ ಪೈ ಪದೆ ಪದೆ ಜಗಳ ತೆಗೆಯುತ್ತಿದ್ದರು. ಕಳೆದ ವಾರ ಪತಿ ಇಲ್ಲದ ಸಮಯ ನೋಡಿ ನನಗೆ ಮತ್ತು ನನ್ನ ಪತ್ನಿಗೆ ಸೊಸೆ ಅಶ್ವಿನಿ ಪೈ ಚಿತ್ರ ಹಿಂಸೆ ನೀಡಿದ್ದಾರೆ. ದೋಸೆ ಸೌಟನ್ನು ಬಿಸಿ ಮಾಡಿ ಅತ್ತೆಯ ತೊಡೆ, ಕಾಲು ಕೈ ಭಾಗಕ್ಕೆ ಇಟ್ಟು ಸುಟ್ಟಿದ್ದಾರೆ ಎಂದು ಆರೋಪಿಯ ಮಾವ ಆರೋಪಿಸಿದ್ದಾರೆ. ಅಲ್ಲದೆ ಬಿಸಿ ಸೌಟನ್ನು ಬಾಯಿಯೊಳಗೆ ತುರುಕಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಯ ಮಾವ ಪೊಲೀಸರಿಗೆ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ. ವೀಣಾ ಪೈ ಮೈ ಮೇಲೆ ಸುಟ್ಟ ಗಾಯಗಳಾಗಿದ್ದು ಅವರನ್ನು ತಡೆಯಲು ಹೋಗಿದ್ದ ವೆಂಕಟೇಶ್ ಪೈ ಅವರಿಗೂ ಗಾಯಗಳಾಗಿದೆ. ವೃದ್ದ ದಂಪತಿ ತನ್ನ ಇನ್ನೊಬ್ಬ ಮಗನ ಮನೆಯಲ್ಲಿ ನೆಲೆಸಿದ್ದಾರೆ.

ಸೊಸೆ ಪ್ರತ್ಯಕ ಮೈದುನನ ಮೇಲೆ ಕೇಸ್

ಅತ್ತೆ ಮಾವನನ್ನು ಚಿತ್ರಹಿಂಸೆ ಮಾಡಿದ್ದ ಕ್ರೂರಿ ಹಿರಿಯ ಸೊಸೆ ಅಶ್ವಿನಿ ಪೈ ವಿರುದ್ದ ಹಲ್ಲೆಗೊಳಗಾದವರ ಮಕ್ಕಳಿಂದ ದೂರು ದಾಖಲಾಗಿತ್ತು. ಕಳೆದ ಮೂರು ನಾಲ್ಕು ದಿನದಿಂದ ತಲೆ ಮರೆಸಿಕೊಂಡಿದ್ದ ಅಶ್ವಿನಿ ಪೈ ಇಂದು ಏಕಾಏಕಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೊಸೆ ಅಶ್ವಿನಿ ಪ್ರತ್ಯಕ್ಷಳಾಗಿದ್ದರು, ನಂತರ ಪ್ರಕರಣಕ್ಕೆ ತಿರುವು ನೀಡುವ ರೀತಿ ಮೈದುನ ಭರತ್ ಪೈ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಲು ಅಶ್ವಿನಿ ಪೈ ಮುಂದಾಗಿದ್ದಾರೆ.

 

Facebook Comments

comments