LATEST NEWS
ಡಾ.ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ
ಡಾ. ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ
ಸುಳ್ಯ, ಜನವರಿ 23 :ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2,3 ಮತ್ತು 4 ರಂದು 16ನೇ ವರ್ಷದ “ರಂಗಸಂಭ್ರಮ- 2018” ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ನಾಟಕಕಾರ ಡಾ. ಡಿ. ಎಸ್. ಚೌಗಲೆ ಬೆಳಗಾವಿ ಇವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೆ. ಮೋಹನ ರಾವ್ ಹಾಗೂ ಪೊಪ್ಯುಲರ್ ಎಜ್ಯುಕೇಶನ್ ಸೊಸೈಟಿ ಅರಂತೋಡು ಇದರ ಅಧ್ಯಕ್ಷರಾದ ಪಿ.ಬಿ. ದಿವಾಕರ ರೈಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ನೇತಾರ, ಶಿಕ್ಷಣ ತಜ್ಞ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವರನ್ನು 2018 ರ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಫೆ. 4 ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಕೆ. ಸೀತಾರಾಮ ರೈ ಸವಣೂರು ವಹಿಸಲಿದ್ದು, ಖ್ಯಾತ ರಂಗ ವಿಮರ್ಶಕ ಗುಡಿಹಳ್ಳಿ ನಾಗರಾಜ ಬೆಂಗಳೂರು ಇವರು ಸಮಾರೋಪ ನುಡಿಯನ್ನು ನುಡಿಯಲಿದ್ದಾರೆ.
ಲೇಖಕಿ ಡಾ. ಕಾತ್ಯಾಯಿನೀ ಕುಂಜಿಬೆಟ್ಟು ಹಾಗೂ ಪತ್ರಕರ್ತೆ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಪ್ರಥಮ ಪ್ರಶಸ್ತಿ ಪಡೆದ ಸುಳ್ಯದ ಬಾಲ ಕಲಾವಿದೆ ಕುಮಾರಿ ವಂಶಿ ರತ್ನಕುಮಾರ್ ಇವರಿಗೆ ರಂಗಮನೆ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
You must be logged in to post a comment Login