ಬಿಜೆಪಿ ಆಡಳಿತ ಇರೋ ರಾಜ್ಯದಲ್ಲಿ ಅಪರಾಧ ಪ್ರಕರಣ ಜಾಸ್ತಿ – ರಾಮಲಿಂಗಾ ರೆಡ್ಡಿ
ಮಂಗಳೂರು ಜನವರಿ 23: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಗೂಂಡಾ ರಾಜ್ಯ ಹೇಳಿಕೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗ ರೆಡ್ಡಿ, ಪ್ರಕಾಶ್ ಜಾವ್ಡೇಕರ್ ಕ್ರೈಮ್ ರೇಟ್ ಬಗ್ಗೆ ಮಾಹಿತಿ ಪಡೆದು ಹೇಳಿಕೆ ನೀಡಬೇಕು. ಕ್ರೈಂ ರೇಟ್ ನಲ್ಲಿ ಕರ್ನಾಟಕ ಹತ್ತನೇ ಸ್ಥಾನದಲ್ಲಿದೆ, ಆದರೆ ಬಿಜೆಪಿ ಆಡಳಿತ ಇರೋ ರಾಜ್ಯದಲ್ಲಿ ಅಪರಾಧ ಪ್ರಕರಣ ಜಾಸ್ತಿ ಇದೆ ಎಂದು ಹೇಳಿದರು. ಕರ್ನಾಟಕ ರಾಜ್ಯದ ಬಗ್ಗೆ ಮತನಾಡುವ ಮೊದಲು ಉತ್ತರಪ್ರದೇಶ ದ ಸ್ಥಿತಿಯನ್ನು ಜಾವ್ಡೇಕರ್ ಅರಿಯಬೇಕು ಎಂದು ಹೇಳಿದರು.
ಕರ್ನಾಟಕ ಬಂದ್ ಹಿಂದೆ ರಾಜ್ಯ ಸರಕಾರದ ಕೈವಾಡ ಆರೋಪದ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಬಂದ್ ಕರೆ ನೀಡಿರೋದ್ರಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಇಲ್ಲ, ರೈತರೇ ದಿನ ನಿಗದಿಪಡಿಸಿ ಬಂದ್ ಗೆ ಕರೆ ನೀಡಿದ್ದಾರೆ, ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಲಾಭ ಇಲ್ಲ ಎಂದು ಹೇಳಿದರು.
ದಕ್ಷಿಣಕನ್ನಡ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಇಲಾಖೆಯ ನಿಯಮಗಳ ಪ್ರಕಾರವೇ ವರ್ಗಾವಣೆ ಮಾಡಲಾಗಿದೆ. 6 ತಿಂಗಳಲ್ಲೇ ವರ್ಗಾವಣೆ ವಿಚಾರ ಇದಲ್ಲ. ಸುಧೀರ್ ಕುಮಾರ್ ಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ಖಾಸಗಿ ಕಾರ್ಯಕ್ರಮ ಭಾಗವಹಿಸಲು ಮಂಗಳೂರಿಗೆ ಬಂದಿದ್ದ