LATEST NEWS
ಇನ್ನು ಹತ್ತು ಸಭೆಗಳಲ್ಲಿ ಸಮರ ಹೇಳಿಕೆಯನ್ನು ಉಲ್ಲೇಖ ಮಾಡುತ್ತೇನೆ – ಸುನಿಲ್ ಕುಮಾರ್
ಇನ್ನು ಹತ್ತು ಸಭೆಗಳಲ್ಲಿ ಸಮರ ಹೇಳಿಕೆಯನ್ನು ಉಲ್ಲೇಖ ಮಾಡುತ್ತೇನೆ – ಸುನಿಲ್ ಕುಮಾರ್
ಉಡುಪಿ ಜನವರಿ 23: ಬಂಟ್ವಾಳದಲ್ಲಿ ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಸಮರ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ದಕ್ಷಿಣಕನ್ನ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಎಲ್ಲರೂ ಬೇಕು ಅಂತ ರೈ ಹೇಳಿದ್ದರೆ ನಮ್ಮ ಆಕ್ರೋಶ ಇರಲಿಲ್ಲ, ಆದರೆ ರಮಾನಾಥ ರೈ ಅವರು ಸ್ಪಷ್ಟವಾಗಿ ಅಂದು ಒಂದು ಸಮುದಾಯವನ್ನು ಉಲ್ಲೇಖ ಮಾಡಿ ಹೇಳಿದ್ದರು. ಹಿಗಾಗಿ ನಾನು ಅಧಿಕೃತ ವಾಗಿಯೇ ಬಂಟ್ವಾಳದಲ್ಲಿ ಈ ರೀತಿಯಾಗಿ ಮಾತನಾಡಿದ್ದೇನೆ ಎಂದು ಹೇಳಿದರು.
ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮೊದಲು ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಲಿ ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದರು.
ಬಂಟ್ವಾಳದಲ್ಲಿ ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಸಮರ – ಸುನೀಲ್ ಕುಮಾರ್
ಆರು ಬಾರಿ ಒಂದು ಸಮುದಾಯದಿಂದ ಗೆದ್ದಿದ್ದೇನೆ ಅಂತ ರಮಾನಾಥ ರೈ ಹೇಳಿದ್ದರು, ಇದು ಬಂಟ್ವಾಳದ ಕ್ಷೇತ್ರದ ಹಿಂದೂಗಳಿಗೆ ಅಪಮಾನ ಮಾಡಿದಂತಾಗಿದೆ. ರಮಾನಾಥ ರೈ ಮಾಡಿರುವ ಅಪಮಾನಕ್ಕೆ ಉತ್ತರ ಕೊಡಬೇಕಾಗಿದೆ. ಈ ಹಿನ್ನಲೆಯಲ್ಲಿ ಇನ್ನೂ ಹತ್ತು ಸಭೆಗಳಲ್ಲಿ ಇದೇ ಹೇಳಿಕೆಯನ್ನು ಉಲ್ಲೇಖ ಮಾಡುತ್ತೇನೆ ಎಂದು ಸುನಿಲ್ ಕಮಾರ್ ಹೇಳಿದ್ದಾರೆ.
You must be logged in to post a comment Login