BANTWAL
ಬಂಟ್ವಾಳದಲ್ಲಿ ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಸಮರ – ಸುನೀಲ್ ಕುಮಾರ್
ಬಂಟ್ವಾಳದಲ್ಲಿ ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಸಮರ – ಸುನೀಲ್ ಕುಮಾರ್
ಮಂಗಳೂರು ಜನವರಿ 23: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧರ್ಮಾಧಾರಿತ ರಾಜಕಾರಣ ಆರಂಭವಾಗುವ ಲಕ್ಷಣ ಗೋಚರಿಸತೊಡಗಿದೆ. ಹಿಂದೆ ಉಸ್ತುವಾರಿ ಸಚಿವ ರಮಾನಾಥ ರೈ ತಾನು ಅಲ್ಲಾಹುವಿನ ಕೃಪೆಯಿಂದ ಚುನಾವಣೆ ಗೆದ್ದಿದ್ದಾಗಿ ಹೇಳಿದ್ದರು. ಇದಕ್ಕೆ ಟಾಂಗ್ ನೀಡುವಂತೆ ನಿನ್ನೆ ಶಾಸಕ ಸುನಿಲ್ ಕುಮಾರ್ ಬಂಟ್ವಾಳದಲ್ಲಿ ನಡೆಯುವ ಚುನಾವಣೆ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ನಡುವಿನ ಚುನಾವಣೆ ಅಲ್ಲ ಇದು ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಸಮರ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿನ್ನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಗ್ರಾಮ ನಡಿಗೆ ಕಾರ್ಯಕ್ರಮದಲ್ಲಿ ಸುನಿಲ್ ಕುಮಾರ್, ರೈಅವರನ್ನು ಟೀಕಿಸುವ ಭರದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಚುನಾವಣೆ ರಮಾನಾಥ ರೈ – ರಾಜೇಶ್ ನಾಯ್ಕ್ ನಡುವಿನ ಸ್ಪರ್ಧೆ ಅಲ್ಲ. ಬದಲಿಗೆ ಅಲ್ಲಾಹು ಮತ್ತು ರಾಮನ ನಡುವಿನ ಸಮರ ಎಂದು ಹೇಳಿ ವಿವಾದಕ್ಕೆ ನಾಂದಿಹಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ನೀವು ಅಲ್ಲಾನನ್ನು ಗೆಲ್ಲಿಸ್ತೀರೋ, ರಾಮನನ್ನು ಗೆಲ್ಲಿಸ್ತೀರೋ, ಯಾರು ಗೆಲ್ಲಬೇಕು ಅನ್ನೋದನ್ನು ಜನ ತೀರ್ಮಾನಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಶಾಸಕ ಸುನೀಲ್ ಕುಮಾರ್ ಬಂಟ್ವಾಳ ಶಾಸಕ ರಮಾನಾಥ ರೈ ಅವರಿಗೆ ನೇರವಾಗಿ ಟಾಂಗ್ ನೀಡಿದ್ದಾರೆ.
ಇದೀಗ ಬಿಜೆಪಿ ಬಂಟ್ವಾಳದಲ್ಲಿ ರಮಾನಾಥ ರೈಯವರನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟು ಬಿಜೆಪಿ ನಡಿಗೆ ಗ್ರಾಮದ ಕಡೆಗೆ, ಪರಿವರ್ತನೆಯೆಡೆಗೆ ಎಂಬ ಧ್ಯೇಯ ವಾಕ್ಯದಡಿ ಯಾತ್ರೆ ಹಮ್ಮಿಕೊಂಡಿದೆ. ಬಿಜೆಪಿ ಮುಖಂಡರು ರಮಾನಾಥ ರೈ ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿದ್ದಾರೆ.
You must be logged in to post a comment Login