Connect with us

  DAKSHINA KANNADA

  ಕ್ಯಾಪ್ಟನ್ ಗೆ ಹುಟ್ಟೂರ ಸನ್ಮಾನ..

   

  ಮಂಗಳೂರು,ಜುಲೈ22;ಭೂಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ರಾಧೇಶ್ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ ಹಿನ್ನಲೆಯಲ್ಲಿ ಇಂದು ಪುತ್ತೂರು ನಾಗರಿಕರ ಪರವಾಗಿ ಅವರನ್ನು ಸನ್ಮಾನಿಸಲಾಯಿತು. ಪುತ್ತೂರ ಶಾಸಕಿ ಶಕುಂತಲಾ ಶೆಟ್ಟಿ ಕ್ಯಾಪ್ಟನ ರಾಧೇಶ್ ಗೆ ಪೇಟ, ಶಾಲು , ಹೂ ಹಣ್ಣು ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಕ್ಯಾಪ್ಟನ್ ರಾಧೇಶ್ ಯುವಜನತೆ ಹೆಚ್ಚು ಹೆಚ್ಚು ಸೇನೆಯಲ್ಲಿ ಸೇರುತ್ತ ಗಮನಹರಿಸಬೇಕೆಂದು ಹೇಳಿದರು.

   ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕೆ ಭವಾನಿ ಚಿದಾನಂದ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

   

  Share Information
  Advertisement
  Click to comment

  You must be logged in to post a comment Login

  Leave a Reply