ಕುಮಾರಧಾರ ನದಿಯಲ್ಲಿ ಯುವಕರು ನೀರು ಪಾಲು

ಪುತ್ತೂರು,ನವೆಂಬರ್ 15 : ಕುಮಾರ ಧಾರ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ತಂಡದ ಪೈಕಿ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ  ದಗನಕಜೆ ಎಂಬಲ್ಲಿ ನಡೆದಿದೆ.

ದೇವಚಳ್ಳ ಗ್ರಾಮದ ದೇವ ಕಾಡು ಹೊನ್ನಪ್ಪರ ಪುತ್ರ ಲತೀಶ್ ಮತ್ತು ಎಲ್ಯಣ್ಣ ಎಂಬವರ ಪುತ್ರ ಲಕ್ಷಿತ್ ಎಂಬವರೇ ನಾಪತ್ತೆಯಾಗಿರುವ ಯುವಕರು.

ಒಟ್ಟು ಐವರ ತಂಡ ಮೀನು ಹಿಡಿಯಲು ತಡ ರಾತ್ರಿ ನದಿ ತೀರಕ್ಕೆ ತೆರಳಿದ್ದು , ಅದರಲ್ಲಿ ಉಳಿದ ಮೂವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದ್ದು , ಘಟನೆಯ ಸ್ಪಷ್ಟ ಚಿತ್ರಣ ಇನ್ನಷ್ಟೇ ದೊರಕಬೇಕಿದೆ.ನಾಪತ್ತೆಯಾದ ಯುವಕರು ನೀರು ಪಾಲಾಗಿದ್ದಾರೆ ಎಂಬ ಸಂಶಯವನ್ನು ಕೆಲವು ಸ್ಥಳಿಯರು ವ್ಯಕ್ತ ಪಡಿಸಿದ್ದಾರೆ.

ಇಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಶೋಧ ಕಾರ್ಯ ಆರಂಭವಾಗಿದೆ ಎನ್ನಲಾಗಿದೆ.

ಹಾಗಾಗಿಯೂ ಸ್ಥಳೀಯ ಈಜುಗಾರರರು ಶೋಧ ಕಾರ್ಯದಲ್ಲಿ ಇಂದು ಬೆಳಿಗ್ಗೆಯಿಂದಲೇ ನಿರತರಾಗಿದ್ದಾರೆ.

ಘಟನೆಯ ಬಗ್ಗೆ ತಿಳಿದಿದ್ದು , ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕವಷ್ಟೆ ಪೂರ್ಣ ಮಾಹಿತಿ ಹೊರಬರಲಿದೆ ಎಂದು ಸುಬ್ರಹ್ಮಣ್ಯ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಾಧವ ಕೂಡಿಗಿಅವರು ತಿಳಿಸಿದ್ದಾರೆ.

3 Shares

Facebook Comments

comments