ಕಡಬ , ಮೇ 18: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಬಳಿಯೇ ಭಿಕ್ಷಟನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬಿಕ್ಷೆ ಬೇಡಿದ ಘಟನೆ ನಡೆದಿದೆ.

ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಗೆ ಜಿಲ್ಲಾಧಿಕಾರಿ ಆಗಮಿಸಿದ್ದರು. ಈ ವೇಳೆ ಭಿಕ್ಷುಕ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಲ್ಲಿ ಕೈಚಾಚಿ ಭಿಕ್ಷಾಟನೆ ಮಾಡಿದ್ದಾರೆ.

ಮೊದಲಿಗೆ ಸರಿಯಾಗಿ ಗಮನಿಸದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಬಳಿಕ ಕಾರಿನಲ್ಲಿ ಕುಳಿತಾಗ ವೃದ್ದ ಭಿಕ್ಷುಕ ಮತ್ತೆ ಕೈಕಾಚಿದ್ದಾನೆ, ಭಿಕ್ಷುಕನ ಕಂಡ ಜಿಲ್ಲಾಧಿಕಾರಿ ಕೈಮುಗಿದು ನಮಸ್ಕರಿಸಿ, ಭಿಕ್ಷುಕನಿಗೆ ಕೈಸನ್ನೇ ಮೂಲಕವೇ ಇಲ್ಲ ಎಂದು ಸೂಚಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತೆರಳಿದ್ದಾರೆ.