ಆರ್ ಎಸ್ ಎಸ್ ಪ್ರಮುಖರೊಂದಿಗೆ ಸಭೆ ನಡೆಸಲಿರುವ ಅಮಿತ್ ಷಾ

ಮಂಗಳೂರು ನವೆಂಬರ್ 14: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ನೇರ ಮಂಗಳೂರಿನ ಸಂಘನಿಕೇತನದಲ್ಲಿರುವ ಆರ್ ಎಸ್ಎಸ್ ಕಚೇರಿಯಲ್ಲಿ ಆಗಮಿಸಿರುವ ಅವರು ಸಂಘನಿಕೇತನದಲ್ಲಿ ಆರ್ ಎಸ್ ಎಸ್ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ವಾರಾಣಸಿಯಲ್ಲಿ ನಡೆಯುತ್ತಿರುವ ಈ ಅಭ್ಯಾಸ ವರ್ಗದ ಬೈಠಕ್​ನಲ್ಲಿ ಭಾಗವಹಿಸಿರುವ ಅಮಿತ್ ಷಾ ಈಗ ಪಶ್ಚಿಮ ಮತ್ತು ದಕ್ಷಿಣ ಭಾರತದ ರಾಜ್ಯಗಳ ಪ್ರಮುಖರ ಬೈಠಕ್​ನಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ್ದಾರೆ. ಈಗಾಗಲೇ ಸಂಘನಿಕೇತನ ತಲುಪಿರುವ ಅಮಿತ್ ಷಾ ಇಂದು ರಾತ್ರಿಯೇ ಸಂಘನಿಕೇತನದಲ್ಲಿರುವ ಆರೆಸ್ಸೆಸ್ ಪ್ರಮುಖರ ಜೊತೆ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ.

ದೇಶದಾದ್ಯಂತ ಚರ್ಚೆಯಲ್ಲಿರುವ ರಾಮಮಂದಿರ, ಶಬರಿಮಲೆ, ಲೋಕಸಭೆ ಚುನಾವಣೆ ವಿಚಾರದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಹೇಳಲಾಗಿದ್ದು, ಯಾವುದೇ ಬಿಜೆಪಿ ನಾಯಕರು, ಜನಪ್ರತಿನಿಧಿಗಳಿಗೆ ಈ ಸಭೆಗೆ ಅನುಮತಿ ಇಲ್ಲ.

ಆರೆಸ್ಸೆಸ್ ಪ್ರಚಾರಕ್ ಪ್ರಮುಖರಿಗೆ ಮಾತ್ರ ಈ ಸಭೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಈ ಸಭೆಯ ಬಳಿಕ ನಗರದ ಓಷ್ಯನ್ ಪರ್ಲ್ ಹೋಟೇಲ್ ನಲ್ಲಿ ಬಿಜೆಪಿ ಜನಪ್ರತಿನಿಧಿಗಳ ಜೊತೆ ಅಮಿತ್ ಷಾ ಸಭೆ ನಡೆಸಲಿದ್ದಾರೆ.

VIDEO

7 Shares

Facebook Comments

comments